ಮಥುರಾ: ಮಥುರಾ ಘರ್ಷಣೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಸಂಸದೆ ಹೇಮಾಮಾಲಿನಿಯನ್ನು ಪೊಲೀಸರು ತಡಿದಿದ್ದಾರೆ.
ಮಥುರಾ ಘರ್ಷಣೆಯನ್ನು ನಿಯಂತ್ರಣಕ್ಕೆ ತರಲಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಹೇಮಾಮಾಲಿನಿಯವರ ಪ್ರವೇಶಕ್ಕೆ ತಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನಾಗರಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಘಟನಾ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಪರಿಸ್ಥಿತಿ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ ಅವರು ಭೇಟಿ ನೀಡಿದಾಗ ಏನಾದರೂ ಅಪಾಯವಾಗಬಹುದು ಈ ಹಿನ್ನಲೆಯಲ್ಲಿ ಅವರ ಭೇಟಿಯನ್ನು ತಡೆ ಹಿಡಿಯಲಾಗಿದೆ ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ.