ನಕಲಿ ನ್ಯಾಯವಾದಿಗಳು 
ದೇಶ

ನ್ಯಾಯಾಂಗ ವ್ಯವಸ್ಥೆಯಲ್ಲಿ 6 ಲಕ್ಷ ನಕಲಿ ನ್ಯಾಯವಾದಿಗಳು!

ದೇಶಾದ್ಯಂತ ನೋಂದಣಿ ಮಾಡಿಕೊಂಡಿರುವ ವಕೀಲರ ಪೈಕಿ ಶೇ.30 ರಷ್ಟು ಅಂದರೆ 20 ಲಕ್ಷ ವಕೀಲರ ಪೈಕಿ 6 ಲಕ್ಷ ವಕೀಲರು ನಕಲಿ ಎಂದು ಭಾರತೀಯ ವಕೀಲರ ಮಂಡಳಿ ಎಚ್ಚರಿಸಿದೆ.

ನವದೆಹಲಿ: ನಿಮ್ಮ ಪ್ರಕರಣವನ್ನು ವಾದಿಸಲು ವಕೀಲರನ್ನು ನೇಮಿಸುವ ಮುನ್ನ ಎರಡು ಬಾರಿ ಯೋಚನೆ ಮಾಡುವಂತಹ ಮಾಹಿತಿಯನ್ನು ಭಾರತೀಯ ವಕೀಲರ ಮಂಡಳಿ ಬಹಿರಂಗಗೊಳಿಸಿದೆ. ದೇಶಾದ್ಯಂತ ನೋಂದಣಿ ಮಾಡಿಕೊಂಡಿರುವ ವಕೀಲರ ಪೈಕಿ ಶೇ.30 ರಷ್ಟು ಅಂದರೆ 20 ಲಕ್ಷ ವಕೀಲರ ಪೈಕಿ 6 ಲಕ್ಷ ವಕೀಲರು ನಕಲಿ ಎಂದು ಭಾರತೀಯ ವಕೀಲರ ಮಂಡಳಿ ಎಚ್ಚರಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಕೀಲರ ಮಂಡಳಿ ತನ್ನಲ್ಲಿ ನೋಂದಣಿ ಮಾಡಿಕೊಂಡಿರುವ ವಕೀಲರ ಪದವಿ ಪ್ರಮಾಣಪತ್ರಗಳನ್ನು ಪರಿಶೀಲಿಸುತ್ತಿದ್ದು ಜೂ.30 ವರೆಗೆ ಈ ಪ್ರಕ್ರಿಯೆ ಮುಂದುವರೆಯಲಿದೆ. ಪ್ರಸ್ತುತ ಬಹಿರಂಗವಾಗಿರುವ ಮಾಹಿತಿ ಪ್ರಕಾರ 20 ಲಕ್ಷ ವಕೀಲರ ಪೈಕಿ 6 ಲಕ್ಷ ವಕೀಲರು ನಕಲಿ ಎಂದು ಬಿಸಿಐ ತಿಳಿಸಿದೆ.

ಪ್ರತಿ 300 ಜನರಿಗೆ ಒಬ್ಬ ವಕೀಲರನ್ನು ಹೊಂದಿರುವ ರಾಷ್ಟ್ರ ರಾಜಧಾನಿ ನವದೆಹಲಿ ಅತಿ ಹೆಚ್ಚು ನಕಲಿ ವಕೀಲರನ್ನು ಹೊಂದಿದೆ. ಬಿಸಿಐ ನ ಮಾಹಿತಿ ಪ್ರಕಾರ 55 ,000 ನೋಂದಣಿ ಮಾಡಿಕೊಂಡಿರುವ ವಕೀಲರಿದ್ದು, ಈ ಪೈಕಿ 20 ,000 ವಕೀಲರು ಪರವಾನಗಿ ಪಡೆದಿದ್ದಾರಾದರೂ ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ ಎಂದು ಗುರುತಿಸಲಾಗಿದೆ. ಬಿಐಸಿ ತನ್ನಲ್ಲಿ ನೋಂದಣಿ ಮಾಡಿಕೊಂಡಿದ್ದ ಎಲ್ಲಾ ವಕೀಲರಿಗೂ ಪ್ರತಿ ಐದು ವರ್ಷಕ್ಕೊಮ್ಮೆ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳುವುದನ್ನು ಕಳೆದ ವರ್ಷದಿಂದ ಕಡ್ಡಾಯಗೊಳಿಸಿತ್ತು. ಅಷ್ಟೇ ಅಲ್ಲದೇ 2015 ರ ಸರ್ಟಿಫಿಕೇಷನ್ ಆಫ್ ಪ್ರಾಕ್ಟೀಸ್(ಸಿಒಪಿ) ಪ್ರಕಾರ ಎಲ್ಲಾ ವಕೀಲರ ಪದವಿ ಪ್ರಮಾಣಪತ್ರವನ್ನು ಪರಿಶೀಲಿಸುವಂತೆ ಬಿಐಸಿ, ದೇಶಾದ್ಯಂತ ಇರುವ ಎಲ್ಲಾ ರಾಜ್ಯ ವಕೀಲರ ಮಂಡಳಿಗೂ ತಿಳಿಸಿತ್ತು. 
ದೆಹಲಿ ಕಾನೂನು ಸಚಿವ ಜಿತೇಂದ್ರ ತೋಮರ್ ನ ನಕಲಿ ಪದವಿ ಪ್ರಮಾಣ ಪ್ರಕರಣ ಬಹಿರಂಗವಾದಾಗಿನಿಂದಲೂ ಭಾರತೀಯ ವಕೀಲ ಮಂಡಳಿ ವಕೀಲರ ಪದವಿ ಪ್ರಮಾಣ ಪತ್ರವನ್ನು ಪರಿಶೀಲಿಸಲು ಕ್ರಮ ಕೈಗೊಂಡಿದೆ. " ದೆಹಲಿಯಲ್ಲಿ ಹೆಚ್ಚು ನಕಲಿ ವಕೀಲರು ಇರುವುದರಿಂದ ಪದವಿ ಪ್ರಮಾಣಪತ್ರವನ್ನು ಪರಿಶೀಸಲು ವಿರೋಧ ವ್ಯಕ್ತವಾಗುತ್ತಿದೆ. ಆದರೆ ನಕಲಿ ವಕೀಲರನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಕ್ರಮ ಕೈಗೊಂಡಿರುವ ವಕೀಲ ಮಂಡಳಿ, ಪದವಿ ಪ್ರಮಾಣ ಪತ್ರ ಪರಿಶೀಲನೆ ನಂತರ ಅರ್ಹ ವಕೀಲರಿಗೆ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ನೀಡಲು ಚಿಂತನೆ ನಡೆಸಿದೆ ಎಂದು ಭಾರತೀಯ ವಕೀಲ ಮಂಡಳಿ ಅಧ್ಯಕ್ಷ ಮನನ್ ಕೆ ಮಿಶ್ರಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT