ದೇಶ

ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಹಿಂದೂ ಮಹಿಳೆಗೆ ಹಿಂಸೆ: 2 ಬಂಧನ

Manjula VN

ಪಾಟ್ನ: ಮುಸ್ಲಿಂ ಯುವಕನೊಬ್ಬನನ್ನು ವಿವಾಹವಾಗಿದ್ದ ಹಿಂದೂ ಮಹಿಳೆಗೆ ಆಕೆಯ ಪತಿ ಹಾಗೂ ಕುಟುಂಬಸ್ಥರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಿಂಸೆ ನೀಡಿರುವ ಘಟನೆಯೊಂದು ಪಾಟ್ನದ ಪುಲ್ವಾರಿಯಲ್ಲಿ ನಡೆದಿದೆ.

ಕೋಲ್ಕತಾ ಮೂಲದ ಮಹಿಳೆಯೊಬ್ಬರು ಪಾಟ್ನದ ಪೂಲ್ವಾರಿ ಮೂಲದ ಆಸಿಫ್ ಎಂಬ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಳು. ಕೆಲ ದಿನಗಳು ಕಳೆಯುತ್ತಿದ್ದಂತೆ ಮಹಿಳೆಗೆ ಹಿಂಸೆ ನೀಡಲು ಆರಂಭಿಸಿರುವ ಆಕೆ ಪತಿ ಆಸಿಫ್ ಇಸ್ಲಾಂ ಧರ್ಮವನ್ನು ಅರಿಯುವ ಸಲುವಾಗಿ ಬಲವಂತದಿಂದ ಮದರಸಾಗೆ ಕಳುಹಿಸಿದ್ದಾನೆ.  

ಅಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಗೋಮಾಂಸ ತಿನ್ನುವಂತೆ ಪತಿ ಹಾಗೂ ಕುಟುಂಬಸ್ಥರು ಹಿಂಸೆ ನೀಡುತ್ತಿದ್ದಾರೆ. ಅಶ್ಲೀಲ ವಿಡಿಯೋವನ್ನು ಚಿತ್ರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಗಾಂಧಿ ಮೈದಾನ್ ಪೊಲೀಸ್ ಠಾಣೆಯ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿ, ತನಿಖೆ ನಡೆಸುತ್ತಿದ್ದಾರೆ.

SCROLL FOR NEXT