ಅಲಹಾಬಾದ್: ಉತ್ತರ ಪ್ರದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದ್ದರೂ ಅಲ್ಲಿನ ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ನಾಚಿಕೆಯಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿಯವರು ಸೋಮವಾರ ಹೇಳಿದ್ದಾರೆ.
ಕೈರಾನ ಹಿಂದೂ ಕುಟುಂಬಗಳ ಸಾಮೂಹಿಕ ವಿಚಾರ ಸಂಬಂಧ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿರುವ ಅವರು, ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಾಗಲಿ, ಸುರಕ್ಷತೆಯಾಗಲಿ ಎರಡೂ ಇಲ್ಲ. ರಾಜ್ಯದಲ್ಲಿ ಅಪರಾಧದಂತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕುಸಿಯುತ್ತಿದ್ದರೂ ಅಲ್ಲಿನ ಸರ್ಕಾರಕ್ಕೆ ಸಾಚಿಕೆ ಇಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಿಲ್ಲ, ರೈತರಿಗೆ ಹಾಗೂ ಜನ ಸಾಮಾನ್ಯ ಪ್ರಾಣಕ್ಕೆ ಭದ್ರತೆಯಿಲ್ಲ. ಇನ್ನು ಕೆಲ ದಿನಗಳು ಕಳೆದರೆ ಉತ್ತರ ಪ್ರದೇಶದ ಎಲ್ಲಾ ಜನತೆ ರಾಜ್ಯವನ್ನು ಬಿಡುತ್ತಾರೆ. ಉತ್ತರಪ್ರದೇಶದಿಂದ ಪ್ರತೀ ದಿನ 10-15 ಕರೆಗಳು ಬರುತ್ತವೆ.
ಪ್ರತೀ ದಿನ ರಾಜ್ಯದಲ್ಲಿ ಅತ್ಯಾಚಾರ, ಅಪಹರಣಗಳಂತಹ ಪ್ರಕರಣಗಳಾಗುವುದು ಸಾಮಾನ್ಯವಾಗಿ ಹೋಗಿದೆ. ರಾಜ್ಯದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ರಾಜ್ಯ ಸರ್ಕಾರಕ್ಕೆ ಮಾತ್ರ ಯಾವುದೇ ನಾಚಿಕೆಯಿಲ್ಲದಂತೆ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.