ಅರವಿಂದ್ ಕೇಜ್ರಿವಾಲ್ 
ದೇಶ

ಬ್ರೆಕ್ಸಿಟ್ ನಂತರ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯಕ್ಕಾಗಿ ಜನಮತ ಸಂಗ್ರಹಕ್ಕೆ ಮುಂದಾದ ಕೇಜ್ರಿವಾಲ್

ಬ್ರಿಟನ್ ನಲ್ಲಿ ಐತಿಹಾಸಿಕ ಬ್ರೆಕ್ಸಿಟ್ ಜನಮತ ಸಂಗ್ರಹದಿಂದ ಪ್ರೇರೆಪಿತರಾಗಿರುವ ಆಮ್ ಆದ್ಮಿ ಪಕ್ಷ, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯಕ್ಕಾಗಿ...

ನವದೆಹಲಿ: ಬ್ರಿಟನ್ ನಲ್ಲಿ ಐತಿಹಾಸಿಕ ಬ್ರೆಕ್ಸಿಟ್ ಜನಮತ ಸಂಗ್ರಹದಿಂದ ಪ್ರೇರೆಪಿತರಾಗಿರುವ ಆಮ್ ಆದ್ಮಿ ಪಕ್ಷ, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯಕ್ಕಾಗಿ ಅದೇ ರೀತಿಯ ಜನಮತ ಸಂಗ್ರಹವಾಗಬೇಕು ಎಂದು ಶುಕ್ರವಾರ ಹೇಳಿದೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದರ ಕುರಿತು ಬ್ರಿಟನ್ ನಲ್ಲಿ ನಡೆದ ಬ್ರೆಕ್ಸಿಟ್ ಜನಮತಗಣನೆಯ ಫಲಿತಾಂಶ ಹೊರಬಿದ್ದಿದ್ದು, ಬ್ರಿಟನ್ ಹೊರನಡೆಯಬೇಕು ಎಂದು ಸ್ಪಷ್ಟ ಜನಾಭಿಪ್ರಾಯ ಬಂದಿದೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಶೀಘ್ರದಲ್ಲೇ ಪೂರ್ಣ ರಾಜ್ಯಕ್ಕಾಗಿ ದೆಹಲಿಯಲ್ಲೂ ಇಂತಹ ಜನಮತಗಣನೆ ನಡೆಯಲಿದೆ ಎಂದಿದ್ದಾರೆ. ಅಲ್ಲದೆ ಎಎಪಿ ನಾಯಕ ಆಶಿಶ್ ಖೇತನ್ ಸಹ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆಯೂ ಹಲವು ಬಾರಿ  ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಕಳೆದ ಮೇ ನಲ್ಲಿ ಈ ಸಂಬಂಧ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದ ದೆಹಲಿ ಸರ್ಕಾರ, ಈ ಕುರಿತು ಸಲಹೆ ನೀಡುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!