ಪಿಎಫ್ ಹಣ (ಸಂಗ್ರಹ ಚಿತ್ರ) 
ದೇಶ

60 ಬಳಿಕ ಪಿಎಫ್ ಪಡೆದರೆ ಹೆಚ್ಚುವರಿ ಬಡ್ಡಿ!

ಪಿಎಫ್ ಫಲಾನುಭವಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, 60 ರ ಬಳಿಕ ಕಾರ್ಮಿಕ ಭವಿಷ್ಯ ನಿಧಿ ಹಣವನ್ನು ಹಿಂಪಡೆದರೆ ಹೆತ್ತುವರಿ ಬಡ್ಡಿ ಹಣವನ್ನು ಪಡೆಯಬಹುದು ಎಂದು ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ...

ನವದೆಹಲಿ: ಪಿಎಫ್ ಫಲಾನುಭವಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, 60 ರ ಬಳಿಕ ಕಾರ್ಮಿಕ ಭವಿಷ್ಯ ನಿಧಿ ಹಣವನ್ನು ಹಿಂಪಡೆದರೆ ಹೆತ್ತುವರಿ ಬಡ್ಡಿ ಹಣವನ್ನು ಪಡೆಯಬಹುದು ಎಂದು ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ.

ಈ ನೂತನ ಯೋಜನೆ ಅನ್ವಯ ಕಾರ್ಮಿಕರು 58ನೇ ವಯಸ್ಸಿನಲ್ಲಿ ಉದ್ಯೋಗದಿಂದ ನಿವೃತ್ತಿ ಹೊಂದಿದ್ದರೂ ಪಿಎಫ್ ಹಣವನ್ನು 60 ವರ್ಷದ ಬಳಿಕ ಹಿಂಪಡೆದರೆ ಖಾತೆದಾರರಿಗೆ ಹೆಚ್ಚುವರಿ ಬಡ್ಡಿಯ ಸೌಲಭ್ಯ ನೀಡುವುದಾಗಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ಘೋಷಿಸಿದೆ. 58 ವರ್ಷದ ಬದಲಾಗಿ 60 ವರ್ಷಗಳಾದ ಮೇಲೆ ಪಿಎಫ್ ಹಣ ಪಡೆದರೆ ಇದಕ್ಕೆ ಹೆಚ್ಚುವರಿಯಾಗಿ ಶೇ.8.16 ಬಡ್ಡಿ ದೊರೆಯಲಿದೆ.

ಈ ಯೋಜನೆಯಿಂದ 40 ಲಕ್ಷ ಖಾತೆದಾರರಿಗೆ ಅನುಕೂಲವಾಗಲಿದ್ದು, ಜತೆಗೆ ಪಿಎಫ್ ಹಣದ ಕೊರತೆ ನಿವಾರಣೆಗೆ ಸಹಾಯಕವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. 58 ವರ್ಷದ ಬಳಿಕ ಪಿಎಫ್  ಹಣವನ್ನು ಹಿಂಪಡೆದುಕೊಳ್ಳದಿದ್ದರೆ ಪ್ರತೀ ವರ್ಷಕ್ಕೆ ಹೆಚ್ಚುವರಿಯಾಗಿ ಶೇ.4 ಬಡ್ಡಿ ನೀಡುವ ವಿಚಾರವನ್ನು ಇಪಿಎಫ್ ಒ ಘೋಷಿಸಿತ್ತು. ಆದರೆ ಇದು ಎರಡು ವರ್ಷಗಳಿಗಷ್ಟೇ ಸೀಮಿತವಾಗಿದ್ದು,  ಖಾತೆದಾರ ಅದಕ್ಕಿಂತ ಹೆಚ್ಚಿನ ಕಾಲ ಹಣವಿಟ್ಟರೆ ಲಾಭ ದೊರೆಯುವುದಿಲ್ಲ. 59 ವರ್ಷದಲ್ಲಿ ಪಿಎಫ್  ಹಣ ಪಡೆದುಕೊಂಡರೆ ಹೆಚ್ಚುವರಿ ಶೇ.4 ಬಡ್ಡಿ ದೊರೆಯಲಿದೆ.

ಏಪ್ರಿಲ್ 25ರಿಂದಲೇ ಇದು ಜಾರಿಗೆ ಬಂದಿದ್ದು, ಇಪಿಎಫ್ ಒದಿಂದ ಪಿಂಚಣಿ ಪಡೆಯುತ್ತಿರುವವರಿಗೆ ಇದು ಅನ್ವಯವಾಗುವುದಿಲ್ಲ. ಜತೆಗೆ 58 ವರ್ಷಕ್ಕೆ 10 ವರ್ಷ ಸೇವೆ ಪೂರ್ಣಗೊಳಿಸಿರುವವರಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT