ದೇಶ

ಸಚಿವ ಅರುಣ್ ಜೇಟ್ಲಿ ಚೀನಾ ಪ್ರವಾಸ ಒಂದು ದಿನ ಮೊಟಕು

Srinivas Rao BV

ನವದೆಹಲಿ: ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ವಾಗ್ದಾಳಿ ಬೆನ್ನಲ್ಲೇ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಚೀನಾ ಪ್ರವಾಸವನ್ನು ಒಂದು ದಿನ ಮುಂಚಿತವಾಗಿಯೇ ಮುಕ್ತಾಯಗೊಳಿಸಿ ಭಾರತಕ್ಕೆ ವಾಪಸ್ಸಾಗಿದ್ದಾರೆ.

ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೇಸ್ಟ್ ಮೆಂಟ್ ಬ್ಯಾಂಕ್ (ಎಐಐಬಿ) ನ ಅಧ್ಯಕ್ಷೀಯ ಮಂಡಳಿ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಚೀನಾಗೆ ತೆರಳಿದ್ದ ಅರುಣ್ ಜೇಟ್ಲಿ, ಜು.24 ರಿಂದ 5 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದರು. 5 ದಿನಗಳ ಪ್ರವಾಸ ಕೈಗೊಂಡಿದ್ದರಾದರೂ ನಾಲ್ಕೇ ದಿನಕ್ಕೆ ಎಲ್ಲಾ ನಿಗದಿತ ಕಾರ್ಯಕ್ರಮಗಳೂ ಪೂರ್ಣಗೊಂಡಿರುವುದರಿಂದ ಅರುಣ್ ಜೇಟ್ಲಿ ಒಂದು ದಿನ ಮುಂಚಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ನಿಗದಿಯಂತೆ ಅರುಣ್ ಜೇಟ್ಲಿ ಜೂ.26 ರಂದು ಚೀನಾದ ವಿತ್ತ ಸಚಿವರನ್ನು ಭೇಟಿ ಮಾಡಬೇಕಿತ್ತು, ಆದರೆ ಈ ಭೇಟಿ ಸೇರಿದಂತೆ ಇನ್ನು ಹಲವು ಪೂರ್ವ ನಿಗದಿತ ಕಾರ್ಯಕ್ರಮಗಳು ಜೂ.27 ರಂದೇ ಪೂರ್ಣಗೊಂಡಿದ್ದು ಜೂ.26 ರ ರಾತ್ರಿಯೇ ಅರುಣ್ ಜೇಟ್ಲಿ ಭಾರತಕ್ಕೆ ವಾಪಸ್ಸಾಗಿದ್ದಾರೆ.

ಅರುಣ್ ಜೇಟ್ಲಿ ಭಾರತಕ್ಕೆ ಒಂದು ದಿನ ಮುಂಚಿತವಾಗಿ ಬರುವುದಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಗಳು ಬೇಗ ಮುಕ್ತಾಯಗೊಂಡಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದರೂ,ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದರ ಬಗ್ಗೆ ಅಸಮಾಧಾನಗೊಂಡು ಚೀನಾ ಪ್ರವಾಸವನ್ನು ಜೇಟ್ಲಿ ಮೊಟಕುಗೊಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

SCROLL FOR NEXT