ಪಿ ಚಿದಂಬರಂ 
ದೇಶ

ಇಶ್ರಾತ್ ಜಹಾನ್ ಪ್ರಕರಣ: 'ಚಿದಂಬರ'ಮ್ ರಹಸ್ಯ ಬಿಚ್ಚಿಟ್ಟ ಗೃಹ ಇಲಾಖೆ ಮಾಜಿ ಅಧಿಕಾರಿ

ಇಶ್ರಾತ್ ಜಹಾನ್ ಪ್ರಕರಣ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ.

ನವದೆಹಲಿ: ಇಶ್ರಾತ್ ಜಹಾನ್ ಪ್ರಕರಣ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ಇಶ್ರಾತ್ ಜಹಾನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಸಲ್ಲಿಸಲಾಗಿದ್ದ ಪ್ರಮಾಣಪತ್ರ ಪಿ ಚಿದಂಬರಂ ಅವರಿಂದ ನಿರ್ದೇಶಿಸಲ್ಪಟ್ಟಿತ್ತು ಎಂದು ಗೃಹ ಇಲಾಖೆಯ ಮಾಜಿ ಅಧೀನ ಕಾರ್ಯದರ್ಶಿ ಆರ್ ವಿ ಎಸ್ ಮಣಿ ಹೇಳಿಕೆ ನೀಡಿದ್ದಾರೆ.
ಅಂದಿನ ಗುಜರಾತ್ ಮುಖ್ಯಮಂತ್ರಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿಸಲು ಇಶ್ರಾತ್ ಜಹಾನ್ ಗೆ ಸಂಬಂಧಿಸಿದಂತೆ ಬದಲಾವಣೆ ಮಾಡಿ ಸಲ್ಲಿಸಲಾಗಿದ್ದ ಎರಡನೇ ಅಫಿಡವಿಟ್ ನ್ನು ಗೃಹ ಕಾರ್ಯದರ್ಶಿಗಿಂತ ಮೇಲಿದ್ದ ಅಂದಿನ ಗೃಹ ಸಚಿವ ಪಿ ಚಿದಂಬರಂ ನಿರ್ದೇಶಿಸಿದ್ದರು ಎಂದು ಮಣಿ ಹೇಳಿದ್ದಾರೆ.
ಇಶ್ರಾತ್ ಜಹಾನ್ ಳ ಭಯೋತ್ಪಾದಕ ಹಿನ್ನೆಲೆಗೆ ಸಂಬಂಧಿಸಿದಂತೆ 2009 ನೆ ಆಗಸ್ಟ್ ನಲ್ಲಿ ನಿರ್ದೇಶಕರೊಂದಿಗೆ ಸೇರಿ ಅಧೀನಕಾರ್ಯದರ್ಶಿ ಆರ್ ವಿ ಎಸ್ ಮಣಿ ಸಿದ್ಧಪಡಿಸಿದ್ದ ಮೊದಲನೇ ಅಫಿಡವಿಟ್ ನಲ್ಲಿ ಇಶ್ರಾತ್ ಜಹಾನ್  ಉಗ್ರಳು ಹಾಗೂ ಆಕೆಯೊಂದಿಗೆ ಹತ್ಯೆಗೀಡಾದ ಮೂವರು ಎಲ್ ಇ ಟಿ ಉಗ್ರರು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  

ನಕಲಿ ಎನ್ ಕೌಂಟರ್ ಎಂದು ಹಣೆಪಟ್ಟಿ ಕಟ್ಟಲಾಗಿದ್ದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಮಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲನೇ ಅಫಿಡವಿಟ್ ಸಲ್ಲಿಕೆಯಾದ ನಂತರ ಎರಡನೇ ಅಫಿಡವಿಟ್ ನ್ನು ನೀಡಿ ಸಿಸಿಎಸ್ ನಡವಳಿಕೆಯ ನಿಯಮಗಳ ಪ್ರಕಾರ ಎರಡನೇ ಅಫಿಡವಿಟ್ ಗೆ ಸಹಿ ಹಾಕಲು ತಮಗೆ ನಿರ್ದೇಶನ ನೀಡಲಾಗಿತ್ತು ಎಂದು  ಆರ್ ವಿ ಎಸ್ ಮಣಿ ಹೇಳಿಕೆ ನೀಡಿದ್ದಾರೆ.
ಇಶ್ರತ್ ಜಹಾನ್ ಉಗ್ರಳು ಎಂಬ ಮೊದಲನೇ ಪ್ರಮಾಣಪತ್ರದ ಅಂಶಗಳಿಗೆ ಭಿನ್ನವಾದ ಅಂಶಗಳಿದ್ದ ಎರಡನೇ ಅಫಿಡವಿಟ್ ನ್ನು ತಾವು ಸಿದ್ಧಪಡಿಸಿರಲಿಲ್ಲ, ತಮ್ಮ ನಂತರದ ಇಬ್ಬರು ಅಧಿಕಾರಿಗಳೂ ಸಹ ಎರಡನೇ ಅಫಿಡವಿಟ್ ನ್ನು ಸಿದ್ಧಪಡಿಸಿರಲಿಲ್ಲ  ಗೃಹ ಇಲಾಖೆ ಕಾರ್ಯದರ್ಶಿಗಿಂತಲೂ ಮೇಲ್ಮಟ್ಟದವರು ಅದನ್ನು ಸಿದ್ಧಪಡಿಸಿದ್ದರು ಎಂದು  ಆರ್ ವಿ ಎಸ್ ಮಣಿ ಸ್ಪಷ್ಟಪಡಿಸಿದ್ದಾರೆ. ಗೃಹ ಇಲಾಖೆ ಕಾರ್ಯದರ್ಶಿಗಿಂತಲೂ ಮೇಲ್ಮಟ್ಟದ ಅಧಿಕಾರ ಇರುವುದು ಗೃಹ ಸಚಿವರಿಗೆ ಈ ಹಿನ್ನೆಲೆಯಲ್ಲಿ ಅಂದಿನ ಗೃಹ ಸಚಿವರಾಗಿದ್ದ ಪಿ ಚಿದಂಬರಂ ಅವರ ಹಂತದಲ್ಲಿ ಎರಡನೇ ಅಫಿಡವಿಟ್ ನ್ನು ಸಿದ್ಧಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT