ಸ್ಫೋಟಗೊಂಡ ಮನೆ 
ದೇಶ

ಅನಿಲ ಸೋರಿಕೆಯಿಂದ ಮನೆ ಸ್ಫೋಟ: ಮಹಿಳೆ ಸಾವು, ಇಬ್ಬರಿಗೆ ಗಾಯ

ಮಧ್ಯ ಪ್ರದೇಶದ ದಮೋಹ್ ಜಲ್ಲೆಯಲ್ಲಿ ಮಣ್ಣಿನಡಿಯಲ್ಲಿ ಹೂತಿದ್ದ ಪೈಪ್ ಮೂಲಕ ಅಡುಗೆ ಅನಿಲ ಪ್ರವಹಿಸಿ ಮನೆ ಸ್ಫೋಟಗೊಂಡ ಪರಿಣಾಮ 65ರ ಹರೆಯದ...

ಮಧ್ಯಪ್ರದೇಶ: ಮಧ್ಯ ಪ್ರದೇಶದ ದಮೋಹ್ ಜಲ್ಲೆಯಲ್ಲಿ ಮಣ್ಣಿನಡಿಯಲ್ಲಿ ಹೂತಿದ್ದ ಪೈಪ್ ಮೂಲಕ ಅಡುಗೆ ಅನಿಲ ಪ್ರವಹಿಸಿ ಮನೆ ಸ್ಫೋಟಗೊಂಡ ಪರಿಣಾಮ 65ರ ಹರೆಯದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ  ಇಬ್ಬರು ಗಾಯಗೊಂಡಿದ್ದಾರೆಎಂದು ಪೊಲೀಸರು ಹೇಳಿದ್ದಾರೆ.
ಅಡುಗೆ ಅನಿಲ ಸೋರಿಕೆಯಾಗಿ ಬೋರ್‌ವೆಲ್ ಪೈಪ್ ಮೂಲಕ ಮನೆಯೊಳಗೆ ಬಂದು ಸ್ಫೋಟವಾಗಿದೆ. ಸ್ಫೋಟದಲ್ಲಿ ಮನೆ ಭಾಗಶಃ ಹಾನಿಯಾಗಿದ್ದು ಇಬ್ಬರಿಗೆ ಗಾಯಗಳಾಗಿದೆ ಎಂದು ಪ್ರಸ್ತುತ ಘಟನೆಯ ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ ಎಂದು ದಮೋಹ್ ಜಿಲ್ಲಾಧಿಕಾರಿ ಶ್ರೀನಿವಾಸ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ ಈ ಘಟನೆ ನಡೆದಿದ್ದು, ಅನಿಲ ಹೇಗೆ ಸೋರಿಕೆಯಾಯಿತು ಎಂಬುದರ ಬಗ್ಗೆ ತಜ್ಞರು ತನಿಖೆ ನಡೆಸುತ್ತಿದ್ದಾರೆ. 
ವಿಶೇಷ ಸಶಸ್ತ್ರಪಡೆ 25 ಬೆಟಾಲಿಯನ್ ಭೋಪಾಲ್ ನ ವೃಂದಾವನ್ ಅಹಿರ್‌ವಾರ್ ಮತ್ತು ಇವರ ಪತ್ನಿ ಶೀಲಾ ರಾಣಿ ಅವರು ಗಾಯಾಳುಗಳಾಗಿದ್ದು, ಅಹಿರ್‌ವಾರ್ ಅವರ ತಾಯಿ ರಾಜ್ ಪ್ಯಾರಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?