ಕೋಲ್ಕತಾ: ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ಒತ್ತಡ ಹಾಗೂ ಕಿರುಕುಳದಿಂದಾಗಿ ನನ್ನ ಆಪ್ತ ಹಾಗೂ ಪ್ರತಿನಿಧಿಯಾಗಿದ್ದ ಮುಕುಲ್ ರಾಯ್ ನನ್ನಿಂದ ದೂರಾದ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ನಾವು ಮುಕುಲ್ ಗೆ ಯಾವುದೇ ರೀತಿಯಲ್ಲೂ ತೊಂದರೆಯನ್ನು ಕೊಂಡಿಟ್ಟ. ಬಿಜೆಪಿ ಕೊಟ್ಟಿದೆ. ಇದು ಸತ್ಯ. ಮುಕುಲ್ ಅವರು ರಾಜಕೀಯದಿಂದ ಕಿರುಕುಳ ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪಕ್ಷದಲ್ಲಿ ವಿಭಜನೆಯ ಮಾತಿಲ್ಲ. ಯಾವುದೇ ರೀತಿಯ ವಿಭಜನೆಯ ನಿರ್ಧಾರಗಳಿಲ್ಲ. ಬಿಜೆಪಿ ನೀಡಿದ ಒತ್ತಡದಿಂದಾಗಿ ಮುಕುಲ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬಿಡುವಂತೆ ಆಗಿತ್ತೇ ಹೊರತು ಇದರಲ್ಲಿ ಪಕ್ಷದ ವತಿಯಿಂದ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.