ಮುಂಬೈ: ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಎದುರು ನೋಡುತ್ತಿರುವ ಹೈವೋಲ್ಟೇಜ್ ನ ಭಾರತ್ ಮತ್ತು ಪಾಕಿಸ್ತಾನ ನಡುವೆ ಮಾರ್ಚ್ 19ರಂದು ನಡೆಯಲಿರುವ ವಿಶ್ವ ಟಿ20 ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೂ ದೇಶ ವಿರೋಧಿ ಹಣೆಪಟ್ಟಿ ನೀಡುವಿರೇ ಎಂದು ಬಿಜೆಪಿಗೆ ಶಿವಸೇನೆ ಬುಧವಾರ ಕೇಳಿದೆ.
ಈ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಸೇನೆಯು, ವೀರಭದ್ರ ಸಿಂಗ್ ಅವರು ಭಾರತ-ಪಾಕಿಸ್ತಾನ ನಡುವಿನ ಟಿ-20 ಕ್ರಿಕೆಟ್ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿರೋಧ ಧರ್ಮದ ಕುರಿತು ಅಥವಾ ರಾಜಕೀಯಗಳಿಗೆ ಸಂಬಂಧಿಸಿದ್ದಲ್ಲ. ಈ ವಿರೋಧ ದೇಶಕ್ಕಾಗಿ ಹಾಗೂ ದೇಶಕ್ಕಾಗಿ ಮಡಿದ ಯೋಧರ ಕುಟುಂಬಸ್ಥರಿಗಾಗಿ. ಪಂದ್ಯವನ್ನು ಆಯೋಜಿಸಿರುವುದರಿಂದ ಯೋಧರಿಗೆ ಅಗೌರವ ಸೂಚಿಸಿದಂತಾಗುತ್ತದೆ ಎಂದು ವೀರಭದ್ರ ಅವರು ಚಿಂತಿಸುವುದಾದರೆ, ಅವರಿಗೆ ದೇಶ ವಿರೋಧಿ ಎಂದು ಹಣೆಪಟ್ಟಿ ನೀಡುವುರೇ, ಅವರ ಅವರನ್ನು ಅಪರಾಧಿ ಎಂದು ಗಲ್ಲಿಗೇರಿಸಿವಿರೇ ಎಂದು ಕಟುವಾಗಿ ಟೀಕಿಸಿದೆ.
ಇದೇ ವೇಳೆ ಪಾಕಿಸ್ತಾನ ಆಟಗಾರರರಿಗೆ ಭದ್ರತೆಯೊದಗಿಸುವುದಾಗಿ ಹೇಳಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ಟೀಕಿಸಿರುವ ಸೇನೆಯು ಪಂದ್ಯಾವಳಿಯಲ್ಲಿರುವ ನಿಮ್ಮ ಆತ್ಮವಿಶ್ವಾಸ ಬೇರೆ ಸಂದರ್ಭಗಳಲ್ಲಿ ಎಲ್ಲಿ ಹೋಗಿರುತ್ತದೆ. ಕ್ರಿಕೆಟ್ ಪಂದ್ಯವನ್ನು ಆಡಿದರೆ ರೈತರ ಆತ್ಮಹತ್ಯೆ ಪ್ರಕರಣಗಳು ನಿಯಂತ್ರಣಗೊಳ್ಳುವುದೇ? ಜಮ್ಮ-ಕಾಶ್ಮೀರದಲ್ಲಿ ಶಾಂತಿ ನೆಲೆಸುವುದೇ? ಗಡಿಯಲ್ಲಿ ನಮ್ಮ ಯೋಧರು ಸುರಕ್ಷಿತರಾಗಿರುವರೇ? ಪಾಕ್ ಪರ ಘೋಷಣೆಗಳು ನಿಲ್ಲುವುದೇ? ಎಂದು ಪ್ರಶ್ನಿಸಿದೆ.
ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಕುರಿತಂತೆ ತನಿಖೆ ನಡೆಸಲು ಪಾಕಿಸ್ತಾನ ತನಿಖಾ ತಂಡದವರು ಭಾರತಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ. ಇದು ಯೋಧರಿಗೆ ಮಾಡಿದ ಅವಮಾನವಾಗಿದೆ. ಸರ್ಕಾರ ಬದಲಾದರೂ ಪಾಕಿಸ್ತಾನ ಕುರಿತ ಓಲೈಕೆ ಮಾತ್ರ ನಿಂತಿಲ್ಲ. ಸರ್ಕಾರಕ್ಕೆ ನಮ್ಮದೊಂದು ನೇರ ಪ್ರಶ್ನೆ ಇದೆ. ನಮಗೆ ವಿದೇಶಾಗ ನೀತಿ ಹಾಗೂ ನೆರೆ ರಾಷ್ಟ್ರದವರೊಂದಿಗೆ ಉತ್ತಮ ಸಂಬಂಧದ ಕುರಿತಂತೆ ಸರಿಯಾಗಿ ತಿಳಿದಿಲ್ಲ. ಆದರೆ, ಕ್ರಿಕೆಟ್ ಪಂದ್ಯ ನಡೆಸುವುದರಿಂದ ಎಲ್ಲಾ ಸಮಸ್ಯೆಗಳು ದೂರಾಗುವುದೇ? ಪಂದ್ಯದಿಂದ ಸಮಾಧಾನಗೊಂಡ ಪಾಕಿಸ್ತಾನ ವಿದೇಶಗಳಲ್ಲಿ ನೆಲೆಯೂರಿರುವ ಕಪ್ಪುಹಣವನ್ನು ಮರಳಿ ದೇಶಕ್ಕೆ ಬರುವಂತೆ ಮಾಡುವುದೇ ಎಂದು ಪ್ರಶ್ನಿಸಿದೆ.
ಈ ಹಿಂದಷ್ಟೇ ಟಿ-20 ಪಂದ್ಯವನ್ನು ಧರ್ಮಶಾಲಾದಲ್ಲಿ ಆಯೋಜಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವೀರಭಧ್ರ ಅವರು, ಆಟಗಾರರಿಗೆ ರಾಜ್ಯ ಸರ್ಕಾರ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಆಟಗಾರರನ್ನು ಸ್ವಾಗತಿಸಿದರೆ ಅಗೌರವ ಸೂಚಿಸಿದಂತಾಗುತ್ತದೆ ಎಂದು ಹೇಳಿದ್ದರು.