ದುಬೈ: ವಿಶ್ವ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದೇ ಖ್ಯಾತಿ ಪಡೆದಿರುವ ಸೌದಿ ಅರೇಬಿಯಾ ಇದೀಗ ಭಾರೀ ಪ್ರಮಾಣ ಸಾಲ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ತೈಲ ಬೆಲೆ ಇಳಿಕೆ, ಹಣಕಾಸು ಸಮಸ್ಯೆಯಿಂದಾಗಿ ಸೌದಿ ಅರೇಬಿಯಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ರು. 54,000 ಸಾವಿರ ಕೋಟಿ ಸಾಲ ಮಾಡಲು ಮುಂದಾಗಿದೆ. ಅಲ್ಲದೆ ಮುಂದಿನ 5 ವರ್ಷಗಳಲ್ಲಿ ಅದನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಸಾಲದ ಬೇಡಿಕೆ ಕುರಿತಂತೆ ಸೌದಿ ಆಡಳಿತ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಸಾಲದ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದೆ.
ಕೆಲವು ದಿನಗಳ ಹಿಂದಷ್ಟೇ ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ವರದಿಯಲ್ಲಿ ಸೌದಿ ಅಂತಾರಾಷ್ಟ್ರೀಯ ಸಾಲ ಪಡೆವ ಬಗ್ಗೆ ಬ್ಯಾಂಕುಗಳೊಂದಿಗೆ ಯೋಜನೆ ರೂಪಿಸುವ ಚರ್ಚೆ ನಡೆಸಿದ್ದಾಗಿ ಹೇಳಲಾಗಿತ್ತು. ಆದರೆ ಈ ಕುರಿತ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಕಳೆದ ವರ್ಷ ಸೌದಿಯ ವಿತ್ತೀಯ ಕೊರತೆ 68 ಸಾವಿರ ಕೋಟಿ ಗಳಿಗೆ ತಲುಪಿತ್ತು. ಹೀಗಾಗಿ ಅದು ವಿದೇಶ ಸಾಲ ಪಡೆಯಲು ಮುಂದಾಗಿದೆ.