ಲೂಧಿಯಾನ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸವಾಲೆಸೆದಿರುವ ಲೂಧಿಯಾನದ 15ವರ್ಷದ ಬಾಲಕಿ ಜಾಹ್ನವಿ ಬೆಹ್ಲ್‌ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬೆದರಿಕೆ ಬರತೊಡಗಿದೆ.
ಫೇಸ್‌ಬುಕ್‌ನಲ್ಲಿ ಜಾಹ್ನವಿ ಬೆಹ್ಲ್‌ಗೆ, ಕನ್ನಯ್ಯಾ ಬೆಂಬಲಿಗರು ಬೆದರಿಕೆ ಹಾಕಿದ್ದು, ಕೆಲ ವ್ಯಕ್ತಿಗಳು ಬಾಲಕಿ ವಿರುದ್ಧ ಅಶ್ಲೀಲ ಭಾಷೆ ಬಳಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಜಾಹ್ನವಿ ತಂದೆ ಅಶ್ವಿನ್ ಬೆಹ್ಲ್ ತಿಳಿಸಿದ್ದಾರೆ. ಇನ್ನು ಈ ಸಂಬಂಧ ಜಾಹ್ನವಿ ತಂದೆ ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಅವರಿಗೆ ದೂರು ಸಲ್ಲಿಸಿದ್ದಾರೆ.
ಕನ್ಹಯ್ಯಾ ಹಾಗೂ ಆತನ ಬೆಂಬಲಿಗರು ಸೋಲುವ ಭಯದಲ್ಲಿ ಈ ರೀತಿಯಾಗಿ ಮಾಡುತ್ತಿದ್ದು, ಅವರು ಮುಕ್ತ ಸಂವಾದದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.