ದೇಶ

ಇಶ್ರತ್ ಜಹಾನ್ ಕೇಸ್: ಕಡತಗಳ ನಾಪತ್ತೆ ಕುರಿತು ತನಿಖೆಗೆ ಸಮಿತಿ ರಚನೆ

Lingaraj Badiger
ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಕಡತಗಳ ಕುರಿತು ತನಿಖೆಗೆ ಕೇಂದ್ರ ಸರ್ಕಾರ ಸೋಮವಾರ ತನಿಖಾ ಸಮಿತಿ ರಚಿಸಿದೆ.
ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಬಿ.ಕೆ.ಪ್ರಸಾದ್ ಅವರನ್ನೊಳಗೊಂಡ ಏಕ ವ್ಯಕ್ತಿ ತನಿಖಾ ಸಮಿತಿ ನಾಪತ್ತೆಯಾಗಿರುವ ಕಡಗಳ ಕುರಿತು ತನಿಖೆ ನಡೆಸಲಿದೆ. 
ಅಂದಿನ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರ ಎರಡು ಪತ್ರಗಳು ಅಫಿಡವಿಟ್ ನ ಕರಡು ಪ್ರತಿ ಸೇರಿದಂತೆ ಗೃಹ ಸಚಿವಾಲಯದಿಂದ ನಾಪತ್ತೆಯಾಗಿರುವ ಎಲ್ಲಾ ದಾಖಲೆಗಳ ಕುರಿತು ಸಮಿತಿ ತನಿಖೆ ನಡೆಸಿ, ಕಡತ ನಾಪತ್ತೆಗೆ ಕಾರಣವಾದ ವ್ಯಕ್ತಿಯನ್ನು ಪತ್ತೆಹಚ್ಚಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಮಾರ್ಚ್ 10ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು,ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಾಖಲೆಗಳು ಸಚಿವಾಲಯದಿಂದ ಕಾಣೆಯಾಗಿವೆ ಎಂದು ಲೋಕಸಭೆಯಲ್ಲಿ ಹೇಳಿದ್ದರು. 
"ಅಂದಿನ ಗೃಹ ಕಾರ್ಯದರ್ಶಿ ೨೦೦೯ರಲ್ಲಿ ಅಟಾರ್ನಿ ಜನರಲ್ ಅವರಿಗೆ ಬರೆದ ಎರಡು ಪತ್ರಗಳು ಕಾಣೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಅಟಾರ್ನಿ ಜನರಲ್ ಎರಡು ಅಫಿಡವಿಟ್ ಗಳನ್ನು ನಮೂದಿಸಿದ್ದಾರೆ. ಅವುಗಳು ಲಭ್ಯವಿಲ್ಲ" ಎಂದು ಇಶ್ರತ್ ಜಹಾನ್ ನಕಲಿ ಎಂಕೌಂಟರ್ ಪ್ರಕರಣದ ಕುರಿತು ಲೋಕಸಭೆಯಲ್ಲಿ ಚರ್ಚಿಸುವಾಗ ರಾಜನಾಥ್ ಸಿಂಗ್ ತಿಳಿಸಿದ್ದರು.
SCROLL FOR NEXT