ಸಾವನ್ನಪ್ಪಿದ್ದ ದಲಿತ ಯುವಕ ಶಂಕರ್ ಹಾಗೂ ಆತನ ಪತ್ನಿ ಕೌಸಲ್ಯ 
ದೇಶ

ನಡುರಸ್ತೆಯಲ್ಲಿ ದಲಿತನ ಮರ್ಯಾದಾ ಹತ್ಯೆ: ಐವರ ಬಂಧನ

ತಮಿಳುನಾಡು: ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ...

ತಮಿಳುನಾಡು: ತಮಿಳುನಾಡು: ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪೊಲೀಸರು ಐವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಮುಖ್ಯ ಅಧಿಕಾರಿಗಳು, ಪ್ರಕರಣ ಸಂಬಂಧ ಪೊಲೀಸ್ ಉಪ ಅಧೀಕ್ಷಕರ ತಂಡ ಐವರನ್ನು ಬಂಧನಕ್ಕೊಳಪಡಿಸಿದ್ದು, ಮಣಿಕಂದನ್ (39), ಸೆಲ್ವಕುಮಾರ್ (25), ಜಗದೀಶನ್ (31), ಮೈಕೆಲ್ ಅಲಿಯಾಸ್ ಮಥನ್ (23), ಮನಿಕಂದನ್ (25) ಎಂದು ಗುರ್ತಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 147 (ಗಲಭೆಯಲ್ಲಿ ತಪ್ಪಿತಸ್ಥರು), 148 (ಜೀವಕ್ಕೆ ಕುತ್ತು ತರುವ ಮಾರಕಾಸ್ತ್ರಗಳ ಬಳಕೆ), 302 (ಕೊಲೆ), 307 (ಕೊಲೆ ಪ್ರಯತ್ನ), 109 (ಪ್ರಚೋದನೆ) ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ದಲಿತ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿಯ ದೃಶ್ಯವೊಂದು ಸಾಕಷ್ಟು ಸುದ್ದಿ ಮಾಡಿತ್ತು.

ತಮಿಳುನಾಡಿದ ತಿರುಪ್ಪೊರಿನ ಉದುಮಲೈಪೆಟ್ಟೈಯಲ್ಲಿ ಘಟನೆ ನಡೆದಿತ್ತು. ತನ್ನ ಮಡದಿಯೊಂದಿಗೆ ರಸ್ತೆ ದಾಟುವ ವೇಳೆ ವಾಹನದಲ್ಲಿ ಬಂದಿರುವ ವ್ಯಕ್ತಿಗಳು ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಯುವಕ ಸಾವನ್ನಪ್ಪಿದ್ದ

ಶಂಕರ್ ಹತ್ಯೆಯಾಗಿದ್ದ ಯುವಕನಾಗಿದ್ದು, ಪೊಲ್ಲಾಚಿಯಲ್ಲಿ ಮೊದಲೇ ವರ್ಷದ ಎಂಜಿನಿಯರಿಂಗ ಓದುತ್ತಿದ್ದ. ಕೌಸಲ್ಯ ಉದಾಮಲ್ ಪೇಟೆಯಲ್ಲ ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಳು. ಕೌಸಲ್ಯ ಮೇಲ್ಜಾತಿಯ ಯುವತಿಯಾಗಿದ್ದು ಅವರ ಕುಟುಂಬಕ್ಕ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೂ ಶಂಕರ್ ಕೌಸಲ್ಯಳನ್ನು ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಕೌಸಲ್ಯ ಸಂಬಂಧಿಕರು ಶಂಕರ್ ಮೇಲೆ ದಾಳಿ ಮಾಡಿದ್ದಾರೆನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video