ಮೋದಿ ಮತ್ತು ಅರುಣ್ ಜೈಟ್ಲಿ 
ದೇಶ

ಹೋಳಿಯಂದು ಮೋದಿ ಪೋಸ್ಟರ್‌ಗೆ ಮೊಟ್ಟೆ, ಕಪ್ಪುಶಾಯಿ: 150 ಮಂದಿ ವಿರುದ್ದ ಎಫ್‌ಐಆರ್

ಇತ್ತೀಚೆಗೆ ನಡೆದ ಹೋಳಿಯಂದು ಉದ್ಯಮಿ, ಚಿನ್ನದ ವರ್ತಕರ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿಯ ಪೋಸ್ಟರ್ ಗೆ ಕಪ್ಪು ಶಾಯಿ ಹಚ್ಚಿ

ಮೀರತ್:  ಇತ್ತೀಚೆಗೆ ನಡೆದ ಹೋಳಿಯಂದು ಉದ್ಯಮಿ, ಚಿನ್ನದ ವರ್ತಕರ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿಯ ಪೋಸ್ಟರ್ ಗೆ ಕಪ್ಪು ಶಾಯಿ ಹಚ್ಚಿ ಮೊಟ್ಟೆಗಳನ್ನು ಎಸೆದಿದ್ದ 150 ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಮೀರತ್ ನ ಉದ್ಯಮಿ ಮುಖಂಡ ರಾಜ್‌ಕುಮಾರ್ ಭಾರದ್ವಾಜ್, ಮೀರತ್ ಬುಲಿಯನ್ ವರ್ತಕರ ಸಂಘದ ಸರ್ವೇಶ್ ಕುಮಾರ್ ಸರಫ್ ಮತ್ತು ಮೂವರು ಸೇರಿದಂತೆ ಐಪಿಸಿ ಸೆಕ್ಷನ್ 147,341 ಮತ್ತು 505 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ , ಇನ್ನು ಉಳಿದ 145 ಜನರ ಹೆಸರು ತಿಳಿದು ಬಂದಿಲ್ಲ.

ಮಾರ್ಚ್ 23 ರಂದು ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳು ಮತ್ತು ಉದ್ಯಮಿಗಳ ತಂಡವು ಮೋದಿ ಹಾಗೂ ಅರುಣ್ ಜೇಟ್ಲಿಯವರಿದ್ದ ಪೋಸ್ಟರ್ ಗೆ ಕಪ್ಪುಶಾಯಿ ಹಚ್ಚಿದ್ದರು, ಜೊತೆಗೆ ಮೊಟ್ಟೆಯನ್ನೂ ಒಗೆದಿದ್ದರೆಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆದರೆ, ಆರೋಪವನ್ನು ನಿರಾಕರಿಸಿರುವ ವರ್ತಕರ ಸಂಘ, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ, ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ ಎಂದು ಆಗ್ರಹಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT