ಇರೋಮ್‌ ಶರ್ಮೀಳಾ 
ದೇಶ

ಆತ್ಮಹತ್ಯೆ ಯತ್ನ ಕೇಸ್‌ನಿಂದ ಇರೋಮ್‌ ಶರ್ಮೀಳಾ ಖುಲಾಸೆ

2006ರಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಮಣಿಪುರದ ಮಾನವ ಹಕ್ಕು ಕಾರ್ಯಕರ್ತೆ...

ನವದೆಹಲಿ: 2006ರಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಮಣಿಪುರದ ಮಾನವ ಹಕ್ಕು ಕಾರ್ಯಕರ್ತೆ ಇರೋಮ್‌ ಶರ್ಮೀಳಾ ಅವರನ್ನು ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಖುಲಾಸೆ ಮಾಡಿದೆ.
2006ರ ಅಕ್ಟೋಬರ್‌ 4ರಂದು ಜಂತರ್‌ ಮಂತರ್‌ನಲ್ಲಿ ಶರ್ಮೀಳಾ ಅವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು 2013ರ ಮಾರ್ಚ್‌ 4ರಂದು ವಿಚಾರಣೆಗೆ ಗುರಿಪಡಿಸಲಾಗಿತ್ತು.
ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರಿ ಕಾಯಿದೆಯನ್ನು ತೆರವು ಗೊಳಿಸಬೇಕೆಂದು ಆಗ್ರಹಿಸಿ 42ರ ಹರೆಯದ ಶರ್ಮೀಳಾ ಅವರು ಕಳೆದ 16 ವರ್ಷಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ತೆರವುಗೊಳಿಸಿದ್ದೇ ಆದಲ್ಲಿ ತಾನು ತನ್ನ ನಿರಶನ ಸತ್ಯಾಗ್ರಹವನ್ನು ಇಂದೇ ಕೊನೆಗೊಳಿಸಲು ಸಿದ್ಧನಿದ್ದೇನೆ ಎಂದು ಶರ್ಮೀಳಾ ಅವರು ನಿನ್ನೆ ಕೋರ್ಟಿಗೆ ಹೇಳಿದ್ದರು . ಮಾತ್ರವಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಮಾತನಾಡಲು ಬಯಿಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Parliament Monsoon Session: ರಾಹುಲ್ ವಿರುದ್ಧ ಆಕ್ರೋಶ; ಸಂಸತ್ ಆವರಣದಲ್ಲಿ NDA ಸಂಸದರ ಬೃಹತ್ ಪ್ರತಿಭಟನಾ ಮೆರವಣಿಗೆ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ..!

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಾರ್ ಕ್ಯಾಷಿಯರ್‌ಗೆ ಬೆದರಿಕೆ; ಇಬ್ಬರು ಉದ್ಯಮಿಗಳು, ಪ್ರಭಾವಿ ಮಹಿಳೆ ಮೇಲೆ ಕಣ್ಣಿಟ್ಟ ಪೊಲೀಸರು!

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!