ಜಪಾನ್ ನಲ್ಲಿದ್ದ ನೇತಾಜಿ ಚಿತಾ ಭಸ್ಮ ಬೇಕಾಗಿಲ್ಲ ಎಂದಿದ್ದ ಯುಪಿಎ ಸರ್ಕಾರ! 
ದೇಶ

ಜಪಾನ್ ನಲ್ಲಿದ್ದ ನೇತಾಜಿ ಚಿತಾ ಭಸ್ಮ ಬೇಕಾಗಿಲ್ಲ ಎಂದಿದ್ದ ಯುಪಿಎ ಸರ್ಕಾರ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಜಪಾನ್ ನ ರೆಂಕೋಜಿ ದೇವಾಲಯದಲ್ಲಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರ ಚಿತಾ ಭಸ್ಮವನ್ನು ಭಾರತಕ್ಕೆ ತರಲು ನಿರಾಕರಿಸಿತ್ತು ಎಂಬುದು ತಾಜಾ ಸುದ್ದಿ.

ನವದೆಹಲಿ: ಕೇಂದ್ರ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸರ ನಿಗೂಢ ಕಣ್ಮರೆಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಗೊಳಿಸುತ್ತಿದ್ದಂತೆಯೇ ಹಲವು ಅಚ್ಚರಿಯ ಮಾಹಿತಿಗಳು ಹೊರಬರುತ್ತಿವೆ. ನೆಹರು ಅವಧಿಯ ಅಚ್ಚರಿಗಳಿಂದ ಹಿಡಿದು ಇತ್ತೀಚಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವರೆಗೂ ನೇತಾಜಿ ವಿಷಯದಲ್ಲಿ ನಡೆದಿರುವ ಬೆಳವಣಿಗೆಗಳೂ ಬೆಳಕಿಗೆ ಬರುತ್ತಿವೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಜಪಾನ್ ನ ರೆಂಕೋಜಿ ದೇವಾಲಯದಲ್ಲಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರ ಚಿತಾ ಭಸ್ಮವನ್ನು ಭಾರತಕ್ಕೆ ತರಲು ನಿರಾಕರಿಸಿತ್ತು ಎಂಬುದು ತಾಜಾ ಸುದ್ದಿ. 2006 ರ ಡಿಸೆಂಬರ್ ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ನೇತಾಜಿ ಚಿತಾ ಭಸ್ಮದ ವಿಷಯವನ್ನು ಪ್ರಸ್ತಾಪಿಸಲು ಉತ್ಸಾಹ ತೋರಿದ್ದರು. ಆದರೆ ಯುಪಿಎ ಸರ್ಕಾರ ನೇತಾಜಿ ವಿಷಯದ ಕುರಿತು ಚರ್ಚಿಸುವುದನ್ನು ನಿರಾಕರಿಸಿತ್ತು ಹಾಗೂ ಚಿತಾ ಭಸ್ಮ ಬೇಕಿಲ್ಲ ಎಂದು ಹೆಳಿತ್ತಂತೆ. ಈ ವಿಷಯವನ್ನು ಪ್ರಧಾನಿ ಕಾರ್ಯಾಲಯ ಬಹಿರಂಗಪಡಿಸಿದೆ. ಮಾ.29 ರಂದು ಬಿಡುಗಡೆಯಾದ ನೇತಾಜಿಗೆ ಸಂಬಂಧಿಸಿದ 50 ರಹಸ್ಯ ಕಡತಗಳಲ್ಲಿ ಈ ಕುರಿತ ಮಾಹಿತಿ ಲಭ್ಯವಿದೆ. 2006 ರಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ನೇತಾಜಿ ಅವರ ಚಿತಾ ಭಸ್ಮವನ್ನು ಭಾರತಕ್ಕೆ ರವಾನಿಸಲು ಉತ್ಸಾಹ ತೋರಿದ್ದರು ಎಂದು ಕಡತಗಳಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!