ಪೊಲೀಸರ ಸರ್ಪಗಾವಲನ್ನೇ ಭೇದಿಸಿ 3 ರೈಫಲ್ ಗಳನ್ನು ಹೊತ್ತೊಯ್ದ ಶಂಕಿತ ಉಗ್ರರು
ಪೊಲೀಸ್ ಕೋಟೆಯನ್ನೇ ಭೇದಿಸಿರುವ ಶಂಕಿತ ಉಗ್ರರು ಅತ್ಯಾಧುನಿಕ ಮೂರು ರೈಫಲ್ಗಳನ್ನು ಕದ್ದೊಯ್ದ ಘಟನೆ ಜಮ್ಮು ಕಾಶ್ಮೀರದ ಕುಲಗಾಂನಲ್ಲಿ ನಡೆದಿದೆ...
ಶ್ರೀನಗರ: ಪೊಲೀಸ್ ಸರ್ಪಗಾವಲನ್ನೇ ಭೇದಿಸಿರುವ ಶಂಕಿತ ಉಗ್ರರು ಅತ್ಯಾಧುನಿಕ ಮೂರು ರೈಫಲ್ಗಳನ್ನು ಕದ್ದೊಯ್ದ ಘಟನೆ ಜಮ್ಮು ಕಾಶ್ಮೀರದ ಕುಲಗಾಂನಲ್ಲಿ ನಡೆದಿದೆ.
ನಾಲ್ಕು ಮಂದಿ ಶಂಕಿತ ಉಗ್ರರು ಕುಲಗಾಂ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ಪಡೆಯನ್ನೇ ಯಾಮಾರಿಸಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ಇದೀಗ ಪೊಲೀಸರ ಕರ್ತವ್ಯ ಪ್ರಜ್ಞೆಯನ್ನೇ ಪ್ರಶ್ನಿಸುವಂತಾಗಿದೆ.
ಲೂಟಿ ಮಾಡಲಾದ ಶಸ್ತ್ರಾಸ್ತ್ರಗಳ ಪೈಕಿ ಎರಡು ಎಕೆ 47 ಆಗಿದ್ದು, ಇನ್ನೊಂದು ಐಎನ್ಎಸ್ಎಎಸ್ ರೈಫಲ್ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಕೂಡಲೇ ಶಂಕಿತರನ್ನು ಬಂಧಿಸಿ, ತನಿಖೆ ನಡೆಸಲು ಆದೇಶಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.