ದೇಶ

ನೌಕಾಪಡೆಯಲ್ಲಿ ವೈಫ್ ಸ್ವಾಪಿಂಗ್ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಸುಪ್ರೀಂ ಆದೇಶ

Rashmi Kasaragodu
ನವದೆಹಲಿ: ನೌಕಾಪಡೆಯಲ್ಲಿ ವೈಫ್ ಸ್ವಾಪಿಂಗ್ (ಪತ್ನಿಯ ಅದಲು ಬದಲು ಕ್ರಿಯೆ) ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ  ವಿಶೇಷ ತನಿಖಾ ತಂಡಕ್ಕೆ ಸುಪ್ರೀಂಕೋರ್ಟ್ ಗುರುವಾರ ಆದೇಶ ನೀಡಿದೆ. 
ಕೇರಳದ ಕೊಚ್ಚಿಯಲ್ಲಿ ನೌಕಾಪಡೆಯ ಹಿರಿಯ ಅಧಿಕಾರಿಯ ಪತ್ನಿ ಸುಜಾತಾ ಕಿರಣ್ ಎಂಬವರು, ಸಹೋದ್ಯೋಗಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ತನ್ನ ಪತಿ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ದೂರು ಸಲ್ಲಿಸಿದ ಸುಜಾತಾ, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. 
ಆದರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ.
2013ರಲ್ಲಿ ಈ ಪ್ರಕರಣ ನಡೆದಿದ್ದು, ಆಗ ರಕ್ಷಣಾ ಸಚಿವರಾಗಿದ್ದ ಎಕೆ ಆ್ಯಂಟನಿ ಅವರು ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು. 
ತನ್ನ ಪತಿಯ ಪ್ರಚೋದನೆಯಿಂದಲೇ ನೌಕಾಪಡೆಯ ಅಧಿಕಾರಿಗಳು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಆರೋಪಿಸಿರುವ 26ರ ಹರೆಯದ ಈ ಮಹಿಳೆ, ಕಮಾಂಡೆಂಟ್ ಒಬ್ಬರ ಪತ್ನಿಯೊಂದಿಗೆ ತನ್ನ ಪತಿ ಲೈಂಗಿಕ ಕ್ರಿಯೆಯಲ್ಲಿ  ತೊಡಗಿರುವುದನ್ನು ನಾನು ನೋಡಿದ್ದೇನೆ ಎಂದಿದ್ದಾರೆ. ನಾನು ವೈಫ್ ಸ್ವಾಪಿಂಗ್ ಪಾರ್ಟಿಗೆ ನಿರಾಕರಿಸಿದಾಗ ತನ್ನ ಪತಿ ನನ್ನನ್ನು ಹುಚ್ಚಿ ಎಂದು ಬಿಂಬಿಸಿದರು.
ಈ ಬಗ್ಗೆ ತಾನು ಕೊಚ್ಚಿಯ ಹಾರ್ಬರ್ ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮಹಿಳೆ ಸುಪ್ರೀಂಕೋರ್ಟ್‌ನಲ್ಲಿ ಹೇಳಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಶೇಷ ತನಿಖಾ ತಂಡವೊಂದನ್ನು ನಿಯೋಜಿಸುವಂತೆ ಕೇರಳ ಪೊಲೀಸರಿಗೆ ಆದೇಶಿಸಿದ್ದು ಮೂರು ತಿಂಗಳ ಅವಧಿಯಲ್ಲಿ ತನಿಖೆ ರ್ಪೂಗೊಳಿಸುವಂತೆ ಹೇಳಿದೆ. 
ಅದೇ ವೇಳೆ ಈ ಪ್ರಕರಣವನ್ನು ಕೇರಳದಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಬೇಕೆಂಬ ಸುಜಾತಾ ಅವರ ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ.
SCROLL FOR NEXT