ಮನೇಕಾ ಗಾಂಧಿ 
ದೇಶ

ಮಹಿಳೆಯರ ವಿರುದ್ಧ 'ಆನ್‌ಲೈನ್ ಟ್ರೋಲ್‌' ಕೂಡಾ ಅಪರಾಧ: ಮನೇಕಾ ಗಾಂಧಿ

ಅಂತರ್ಜಾಲದಲ್ಲಿ ಮಹಿಳೆಯರನ್ನು ಟ್ರೋಲ್ (ಅಪಹಾಸ್ಯ ) ಮಾಡುವುದು ಕೂಡಾ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು...

ನವದೆಹಲಿ: ಅಂತರ್ಜಾಲದಲ್ಲಿ ಮಹಿಳೆಯರನ್ನು ಟ್ರೋಲ್ (ಅಪಹಾಸ್ಯ ) ಮಾಡುವುದು ಕೂಡಾ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ನೆಟಿಜನ್‌ಗಳಿಗೆ ಆನ್‌ಲೈನ್‌ನಲ್ಲಿ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿ ತಾನು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿರುವ ಮನೇಕಾ, ಆನ್‌ಲೈನ್ ನಲ್ಲಿ ಟ್ರೋಲ್‌ಗೊಳಗಾಗುವ ವಿಷಯಗಳು ಮತ್ತು ಅವಮಾನಿಸಲ್ಪಡುವ ಸಂಗತಿಗಳು ಕೂಡಾ ಈ ಹೊಸ ನಿಯಮದ ವ್ಯಾಪ್ತಿಗೊಳಪಡಲಿದೆ ಎಂದಿದ್ದಾರೆಯ.
ಮಹಿಳೆಯರಿಗಾಗಿರುವ ರಾಷ್ಟ್ರೀಯ ನೀತಿಯ ಕರಡು ಪ್ರತಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿತ್ತು. ಮಹಿಳೆಯರ ವಿರುದ್ಧದ ದೌರ್ಜನ್ಯಗಳನ್ನು ಅವರು ಹೇಗೆ ಎದುರಿಸಬೇಕೆಂಬುದನ್ನು ಈ ಕರಡು ಪ್ರತಿಯಲ್ಲಿ ವಿವರಿಸಲಾಗಿದೆ. ಸೈಬರ್ ಅಪರಾಧಗಳನ್ನು ತಡೆಯುವ ಬಗ್ಗೆ ಮತ್ತು  ಬಾಡಿಗೆಗೆ ಗರ್ಭ ನೀಡುವ ಅಮ್ಮಂದಿರನ್ನು ಸಂರಕ್ಷಿಸಲು ಮತ್ತು ಕುಟುಂಬ ಯೋಜನೆಯ ಬಗ್ಗೆಯೂ ಈ ನೀತಿಯಲ್ಲಿ ವಿವರಿಸಿ ಹೇಳಲಾಗಿದೆ. ಮಾನಭಂಗ, ಕಳ್ಳ ಸಾಗಾಣಿಕೆ, ವರ ದಕ್ಷಿಣೆ, ಮಹಿಳೆಯರ ಉದ್ಯೋಗದ ಸಮಸ್ಯೆ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಸೂಚಿಯನ್ನು ಇಲ್ಲಿ ನೀಡಲಾಗಿದೆ.
ಮುಂದಿನ 25-20 ವರ್ಷಗಳಲ್ಲಿ ಮಹಿಳೆಯರ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಈ ನಿಯಮವನ್ನು ರೂಪಿಸಲಾಗಿದೆ. 2001ರಲ್ಲಿ ಈ ಬಗ್ಗೆ ಮೊದಲ ಬಾರಿಗೆ ನಿಯಮ ರೂಪಿಸಲಾಗಿತ್ತು. ಆರೋಗ್ಯ, ಪೋಷಕಾಹಾರ, ಆಹಾರ ಸುರಕ್ಷೆ, ವಿದ್ಯಾಭ್ಯಾಸ, ಆರ್ಥಿಕತೆ, ರಾಜಕೀಯದಲ್ಲಿ ಮೀಸಲಾತಿ, ಮಹಿಳೆಯರ ವಿರುದ್ಧದ ದೌರ್ಜನ್ಯ ಮೊದಲಾದ ಸಮಸ್ಯೆಗಳ ಪರಿಹಾರದ ಬಗ್ಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮನೇಕಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ