ಕನ್ಹಯ್ಯ ಕುಮಾರ್ 
ದೇಶ

ಪಿ ಎಚ್ ಡಿ ಮುಗಿಸುವುದು ರಾಜಕೀಯ ಜವಾಬ್ದಾರಿಯಾಗಿ ಮಾರ್ಪಟ್ಟಿದೆ: ಕನ್ಹಯ್ಯ ಕುಮಾರ್

ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿರುವ ಹಾಗೂ ಜಾಮೀನಿನ ಮೇಲೆ ಹೊರಗಿರುವ ಜವಾಹಾರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್

ನವದೆಹಲಿ: ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿರುವ ಹಾಗೂ ಜಾಮೀನಿನ ಮೇಲೆ ಹೊರಗಿರುವ ಜವಾಹಾರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಈಗ ತಮಗೆ ಪಿ ಎಚ್ ಡಿ ಮುಗಿಸುವುದು ಶೈಕ್ಷಣಿಕ ಜವಾಬ್ದಾರಿಗಿಂತಲೂ ರಾಜಕೀಯ ಜವಾಬ್ದಾರಿಯಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

"ನಮಗೆ ನೀಡಲಾಗುತ್ತಿರುವ ಸಬ್ಸಿಡಿ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ" ಎಂದು, ಜೆ ಎನ್ ಯು ನಲ್ಲಿ ವಿದ್ಯಾರ್ಥಿಗಳು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಜನರ ತೆರಿಗೆ ಹಣವನ್ನು ವ್ಯಯಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ್ದಾರೆ.

"ಪಿ ಎಚ್ ಡಿ ಮುಗಿಸಲು ಇಷ್ಟು ಸಮಯ ಏಕೆ ಹಿಡಿಯುತ್ತಿದೆ ಎಂದು ನಮ್ಮನ್ನು ಕೇಳುತ್ತಿದ್ದಾರೆ. ಆದುದರಿಂದ ಇದು ಶೈಕ್ಷಣಿಕ ಜವಾಬ್ದಾರಿಗಿಂತಲೂ ರಾಜಕೀಯ ಜವಾಬ್ದಾರಿಯಾಗಿ ಮಾರ್ಪಟ್ಟಿದೆ" ಎಂದು ಕನ್ಹಯ್ಯ ನೀತಿ ಪರಿಶೀಲನಾ ಕೆಂದ್ರ ಆಯೋಜಿಸಿದ್ದ 'ಐಡಿಯಾ ಆಫ್ ಇಂಡಿಯಾ' ಸಮಾವೇಶದಲ್ಲಿ ಹೇಳಿದ್ದಾರೆ.

ಅಲ್ಲದೆ ಸರ್ಕಾರ ಶೈಕ್ಷಣಿಕ ವ್ಯವಸ್ಥೆಯನ್ನು ನಾಶ ಪಡಿಸಲು ಪ್ರಯತ್ನಿಸುತ್ತಿದೆ ಎಂದು ಕೂಡ ದೂರಿದ್ದಾರೆ. "ಎಲ್ಲ ಸರ್ಕಾರಗಳು ಭಾರತದಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ನಾಶ ಪಡಿಸಲು ಪ್ರಯತ್ನಿಸಿವೆ. ಏಕೆಂದರೆ ಶಿಕ್ಷಣ ಜನರಿಗೆ ಕಲಿಕೆ ತಂದು ಪ್ರಶ್ನೆಗಳನ್ನು ಕೇಳುವಂತೆ ಮಾಡಿ ತಮ್ಮದೇ ಅಭಿಪ್ರಾಯಗಳನ್ನು ರೂಪಿಸುತ್ತದೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!