ಮಧ್ಯಪ್ರದೇಶ: ದೇಶದ ಹವಾಮಾನ ವೈಪರೀತ್ಯಕ್ಕೆಲ್ಲಾ ಸೂರ್ಯನೇ ಕಾರಣ ಎಂದು ಆರೋಪಿಸಿ ಮಧ್ಯಪ್ರದೇಶದ ಮೂಲದ ವ್ಯಕ್ತಿಯೊಬ್ಬ ಸೂರ್ಯನ ವಿರುದ್ಧವೇ ದೂರು ದಾಖಲಿಸಿದ್ದಾನೆ.
ಹವಾಮಾನ ವೈಪರೀತ್ಯಕ್ಕೆ ಮಾನವನೇ ಪ್ರಮುಖ ಕಾರಣ ಎಂದು ತಿಳಿದಿದ್ದರೂ, ಸೂರ್ಯನನ್ನೇ ಆರೋಪಿಯನ್ನಾಗಿಸಿ, ಅತೀವ ಬಿಸಿಲಿಗೆ ಸೂರ್ಯನೇ ಕಾರಣ. ಹೀಗಾಗಿ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ.
ಅರ್ಜಿದಾರ ಶಿವಪಾಲ್ ಸಿಂಗ್ ಯಾದವ್ ವಕೀಲರಾಗಿದ್ದಾರೆ. ಸೂರ್ಯನ ಮೇಲೆ ಸೆಕ್ಷನ್ 154(ಕ್ರಿಮಿನಲ್ ಅಪರಾಧ ಪ್ರಕರಣ) ಮೊಕದ್ದಮೆ ದಾಖಲಿಸಲು ಅರ್ಜಿಯಲ್ಲಿ ಹೇಳಿದ್ದಾರೆ. ಕಳೆದ ಒಂದು ವಾರದಿಂದ ತೀವ್ರ ಬಿಸಿಲಿನಿಂದಾಗಿ ಮಾನವರು, ಹಕ್ಕಿಗಳು, ಪ್ರಾಣಿಗಳೂ ಸೇರಿ ಸಕಲ ಜೀವಸಂಕುಲ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಗೆ ಒಳಗಾಗಿವೆ ಎಂದು ದೂರಿದ್ದಾರೆ.