ಕೆಪಿ ಸಿಂಗ್ 
ದೇಶ

ಸಾಮಾನ್ಯ ಮನುಷ್ಯನಿಗೆ ಅಪರಾಧಿಯನ್ನು ಕೊಲ್ಲುವ ಹಕ್ಕು ಇದೆ: ಹರ್ಯಾಣ ಡಿಜಿಪಿ

ಸಾಮಾನ್ಯ ಮನುಷ್ಯನಿಗೆ ಅಪರಾಧಿಯ ಜೀವ ತೆಗೆಯುವ ಹಕ್ಕು ಇರುತ್ತದೆ ಎಂದು ಹರಿಯಾಣ ಡಿಜಿಪಿ ಕೆಪಿ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

ಚಂಡಿಘಡ: ಸಾಮಾನ್ಯ ಮನುಷ್ಯನಿಗೆ ಅಪರಾಧಿಯ ಜೀವ ತೆಗೆಯುವ ಎಲ್ಲಾ ಹಕ್ಕು ಇರುತ್ತದೆ ಎಂದು ಹರಿಯಾಣ ಡಿಜಿಪಿ ಕೆಪಿ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಹೇಳಿಕೆ ನೀಡುವ ಬದಲು , ಅಪರಾಧ ಮಾಡಲು ಕುಮ್ಮಕ್ಕು ನೀಡುವ ಡಿಜಿಪಿ ಹೇಳಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸ್ತಂಭೀಭೂತರಾದರು.

ಒಂದು ವೇಳೆ ಯಾರಾದರೂ ನಿಮ್ಮ ಮನೆಯನ್ನು ಬೆಂಕಿಯಲ್ಲಿ ಸುಟ್ಟು, ನಿಮ್ಮನ್ನು ಕೊಲ್ಲಲು ಪ್ರಯತ್ನಿಸಿದರೇ ಅಂಥವರನ್ನು ಕೊಲ್ಲಲು ಸಾಮಾನ್ಯ ಮನುಷ್ಯರಿಗೆ ಹಕ್ಕು ಇರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯಾರಾದರೂ ಮಹಿಳೆಯನ್ನು ಅವಮಾನಿಸಿ ಕೊಲ್ಲಲು ಪ್ರಯತ್ನಿಸಿದರೆ, ಅಂಥವರನ್ನು ಕೊಲ್ಲಲು ಸಾಮಾನ್ಯ ಮನುಷ್ಯನಿಗೆ ಅಧಿಕಾರವಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಈಗಾಗಲೇ ಅಂತ ಘಟನೆ ನಡೆಯುವ ಪ್ರದೇಶಗಳಲ್ಲಿ ಇದ್ದರೂ, ಸಾಮಾನ್ಯ ಮನುಷ್ಯನ ಪಾತ್ರ ಏನೆಂಬುದನ್ನು ಅರಿಯುವ ಅವಶ್ಯಕತೆ ಇರುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು