ಚೆನ್ನೈ: ಪ್ರತಿ ತಿಂಗಳ 9 ನೇ ತಾರೀಖಿನಂದು ಖಾಸಗಿ ಆಸ್ಪತ್ರೆಗಳು ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಕರೆ ನೀಡಿದ ಮರು ದಿನವೇ ಅಪೊಲೊ ಆಸ್ಪತ್ರೆ ತನ್ನ 64 ಆಸ್ಪತ್ರೆಗಳಲ್ಲಿ 9.000 ವೈದ್ಯರಿಂದ ಚಿಕಿತ್ಸೆಗೆ ನಿರ್ಧರಿಸಿದೆ.
ಚೆನ್ನೈ ನಲ್ಲಿ ಮಾತನಾಡಿದ ಅಪೊಲೋ ಗ್ರೂಪ್ ನ ಅಧ್ಯಕ್ಷ ಡಾ. ಪ್ರತಾಪ್ ರೆಡ್ಡಿ ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ಪ್ರತಿ ತಿಂಗಳ 9 ನೇ ತಾರೀಖಿನಂದು ಉಚಿತ ಕ್ಯಾಂಪ್ ನಡೆಸಿ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಆಶಯದಂತೆ ಪ್ರತಿ ತಿಂಗಳ 9ನೇ ತಾರೀಖು ತಾಯಂದಿರಿಗೆ ಮೀಸಲಾಗಿಡಲಾಗುತ್ತದೆ. ಈ ರಾಷ್ಟ್ರೀಯ ಸೇವೆಯಲ್ಲಿ ತಾವು ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ 1.600 ಮಂದಿಗೆ ಒಬ್ಬ ವೈದ್ಯರಿದ್ದಾರೆ. ಕನಿಷ್ಠ ಪಕ್ಷ 1 ಸಾವಿರ ಮಂದಿಗೆ ಒಬ್ಬ ವೈದ್ಯನ ಅವಶ್ಯಕತೆ ಇದೆ ಎಂದು ಹೇಳಿದೆ.