ಎನ್ ಕೌಂಟರ್ ನಡೆದ ಈಟ್ ಖೇಡಿ ಗ್ರಾಮ (ಸಂಗ್ರಹ ಚಿತ್ರ) 
ದೇಶ

ಪ್ರವಾಸಿ ತಾಣವಾಗುತ್ತಿರುವ ಸಿಮಿ ಉಗ್ರರ ಎನ್ ಕೌಂಟರ್ ಸ್ಥಳ!

8 ಮಂದಿ ಸಿಮಿ ಉಗ್ರರ ಎನ್ ಕೌಂಟರ್ ಗೆ ಸಾಕ್ಷಿಯಾದ ಭೋಪಾಲ್ ಹೊರವಲಯದ ಗ್ರಾಮ ಇದೀಗ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದ್ದು...

ಭೋಪಾಲ್: 8 ಮಂದಿ ಸಿಮಿ ಉಗ್ರರ ಎನ್ ಕೌಂಟರ್ ಗೆ ಸಾಕ್ಷಿಯಾದ ಭೋಪಾಲ್ ಹೊರವಲಯದ ಗ್ರಾಮ ಇದೀಗ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದ್ದು, ಉಗ್ರರು ಹತರಾದ ಜಾಗಕ್ಕೆ ಇದೀಗ  ಸ್ಥಳೀಯ ಸಾವಿರಾರು ಮಂದಿ ಗ್ರಾಮಸ್ಥರು ಬಂದು ಹೋಗುತ್ತಿದ್ದಾರೆ.

ಆಘಾತಕಾರಿ ಅಂಶವೆಂದರೆ ಉಗ್ರರು ಸಾವನ್ನಪ್ಪಿದ್ದ ಈ ಸ್ಥಳದಲ್ಲಿ ಉಗ್ರರ ಸಾಯುವ ವೇಳೆ ಅವರ ಬಳಿದ್ದ ಕೆಲ ವಸ್ತುಗಳು ಇಲ್ಲೇ ಇದ್ದು, ಈ ವಸ್ತುಗಳನ್ನು ಇನ್ನೂ ಪೊಲೀಸರು  ವಶಪಡಿಸಿಕೊಂಡಿಲ್ಲ. ಹೀಗಾಗಿ ಈ ವಸ್ತುಗಳೊಂದಿಗೆಯೇ ಸ್ಥಳೀಯ ಯುವಕರ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಅತ್ತ ಪ್ರತಿಪಕ್ಷಗಳು ಎನ್ ಕೌಂಟರ್ ನಕಲಿ ಎಂದು ವಾದ ಮಾಡುತ್ತಿದ್ದು,  ಒಂದು ವೇಳೆ ಪ್ರತಿಪಕ್ಷಗಳ ಒತ್ತಡಕ್ಕೆ ಸರ್ಕಾರ ಮಣಿದು ಪ್ರಕರಣವನ್ನು ತನಿಖೆಗೆ ಒಪ್ಪಿಸಿದರೆ ಆಗ ಈ ವಸ್ತುಗಳೆಲ್ಲಾ ತನಿಖೆ ಅನಿವಾರ್ಯವಾಗುತ್ತದೆ.

ಈ ವಿಚಾರ ತಿಳಿದಿದ್ದರೂ ಸ್ಥಳೀಯ ಪೊಲೀಸರು ಮಾತ್ರ ಘಟನಾ ಪ್ರದೇಶಕ್ಕೆ ಯಾವುದೇ ರೀತಿಯ ಭದ್ರತೆಯನ್ನು ಒದಗಿಸಿಲ್ಲ. ಕನಿಷ್ಟ ಓರ್ವ ಪೇದೆಯನ್ನು ಕೂಡ ವೀಕ್ಷಣೆಗೆ ನೇಮಿಸಿಲ್ಲ ಎಂದು  ಹೇಳಲಾಗುತ್ತಿದೆ.

ಎನ್ ಕೌಂಟರ್ ನಡೆದ ಈಟ್ ಖೇಡಿ ಗ್ರಾಮದ ಸುತಮುತ್ತ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿದ್ದು, ಈ ಹಳ್ಳಿಗಳಿಂದ ನಿತ್ಯ ಸುಮಾರು ಸಾವಿರಾರು ಯುವಕರು ಇಲ್ಲಿಗೆ ಆಗಮಿಸಿ ಸೆಲ್ಫಿ  ತೆಗೆದುಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಈಟ್ ಖೇಡಿ ಗ್ರಾಮ ಹಾಗೂ ಎನ್ ಕೌಂಟರ್ ಪ್ರದೇಶ ಪ್ರವಾಸಿ ತಾಣವಾಗಿ ಬದಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP