ವಾಯುಮಾಲಿನ್ಯ(ಸಂಗ್ರಹ ಚಿತ್ರ) 
ದೇಶ

ದೆಹಲಿಯಷ್ಟೇ ಅಲ್ಲ, ಭಾರತದ 94 ನಗರಗಳಲ್ಲಿ ಇದೆ ಕಳಪೆ ಗುಣಮಟ್ಟದ ಗಾಳಿ!

2011 ರಿಂದ ಈ ವರೆಗೆ 94 ಭಾರತೀಯ ನಗರಗಳು ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪಲು ಸಾಧ್ಯವಾಗಿಲ್ಲ

ನವದೆಹಲಿ: ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಕಳೆದ 17 ವರ್ಷಗಳಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯ ಪೀಡಿತ ಪ್ರದೇಶವಾಗಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ, ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಘಾತಕಾರಿ ಅಂಶ ಹೊರಬಿದ್ದಿದೆ. 
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, 2011 ರಿಂದ ಈ ವರೆಗೆ 94  ಭಾರತೀಯ ನಗರಗಳು ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ರಾಷ್ಟ್ರೀಯ  ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪದ ನಗರಗಳ ಪಟ್ಟಿಯಲ್ಲಿ ಹಲವು ನಗರಗಳು 1990 ರಿಂದಲೂ ಹಾಗೆಯೇ ಉಳಿದುಕೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ. 
ಗುಣಮಟ್ಟ ದರ್ಜೆಯನ್ನು ತಲುಪದ ನಗರಗಳ ಪಟ್ಟಿಯಿಂದ ನಗರಗಳನ್ನು ಹೊರತರುವುದಕ್ಕೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರಗಳಾಗಲಿ ಪರಿಣಾಮಕಾರಿಯಾದ ಯೋಜನೆಗಳನ್ನು ಈ ವರೆಗೂ ಜಾರಿಗೆ ತಂದಿಲ್ಲ. ಇದು ದೇಶದ ಆಂತರಿಕ ಸಂಸ್ಥೆಗಳು ನೀಡಿರುವ ವರದಿಯಾದರೆ, ವಿಶ್ವಸಂಸ್ಥೆ ಪ್ರಕಟ ಮಾಡಿರುವ ವಿಶ್ವದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ 20 ನಗರಗಳ ಪಟ್ಟಿಯಲ್ಲಿ 10 ನಗರಗಳು ಭಾರತದ್ದೇ ಆಗಿವೆ ಎಂಬುದು ಮತ್ತೊಂದು ಅಘಾತಕಾರಿ ಅಂಶವಾಗಿದೆ, ಕಳೆದ ಕೆಲವು ವರ್ಷಗಳಿಂದ ದೆಹಲಿ, ಖಾನ್ ಪುರ, ಲಖನೌ, ವಾರಾಣಸಿ ನಗರಗಳ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿವೆ. ಇಷ್ಟಾದರೂ ಈ ವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ನಗರಗಳ ಸ್ಥಳೀಯ ಆಡಳಿತಗಳು ಜಾಗೃತಗೊಂಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!