ಸಾಂದರ್ಭಿಕ ಚಿತ್ರ 
ದೇಶ

ಮಾಜಿ ಪ್ರೇಯಸಿಯ ಪತಿಗೆ ವಿಷಪೂರಿತ ಮದ್ಯದ ಬಾಟಲಿ ಗಿಫ್ಟ್ ನೀಡಿದ ಟೆಕ್ಕಿ

ತನ್ನ ಮಾಜಿ ಪ್ರಿಯತಮೆಯನ್ನು ಮದುವೆಯಾಗುವ ಬಯಕೆಯಿಂದ ಚೆನ್ನೈ ಮೂಲದ ಟೆಕ್ಕಿಯೊಬ್ಬ ಹುಡುಗಿಯ...

ವೆಲ್ಲೂರು: ತನ್ನ ಮಾಜಿ ಪ್ರಿಯತಮೆಯನ್ನು ಮದುವೆಯಾಗುವ ಬಯಕೆಯಿಂದ ಚೆನ್ನೈ ಮೂಲದ ಟೆಕ್ಕಿಯೊಬ್ಬ ಹುಡುಗಿಯ ಪತಿಗೆ ವಿಷ ಬೆರೆಸಿದ ವಿಸ್ಕಿ ಕುಡಿಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ತಮಿಳು ನಾಡಿನ ವೆಲ್ಲೂರಿನಲ್ಲಿ ನಡೆದಿದೆ. 
ವಿಸ್ಕಿ ಕುಡಿದು ಇಬ್ಬರು ಅಸ್ವಸ್ಥಕ್ಕೀಡಾದ ನಂತರ  ಅಕ್ಟೋಬರ್ 29ರಂದು ಘಟನೆ ಬೆಳಕಿಗೆ ಬಂದಿದೆ.
 ಮೊನೊಕ್ರೊಟೊಫೊಸ್ ಎಂಬ ಕೀಟನಾಶಕವನ್ನು ಮದ್ಯದಲ್ಲಿ ಬೆರೆಸಿ ಆರೋಪಿ ವಿನಾಯಕ ಮೂರ್ತಿ ಕೊರಿಯರ್ ನಲ್ಲಿ ಕಳುಹಿಸಿದ್ದ. ಅದನ್ನು ಕುಡಿದರೆ ತನ್ನ ಮಾಜಿ ಪ್ರೇಯಸಿಯ ಗಂಡ ಮರಣ ಹೊಂದಿ ತಾನು ಆಕೆಯನ್ನು ಮದುವೆಯಾಗಬಹುದು ಎಂಬುದು ಆತನ ಉದ್ದೇಶವಾಗಿತ್ತು. ಮದ್ಯದ ಬಾಟಲ್ ಕಳುಹಿಸುವಾಗ ಅದರಲ್ಲಿ ಒಂದು ಪತ್ರವನ್ನು ಬರೆದು ತಮ್ಮ ಮೊಬೈಲ್ ನಂಬರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದು ಬರೆದು ಕಳುಹಿಸಿದ್ದ.
ಮದ್ಯವನ್ನು ಸೇವಿಸಿದ ಯುವತಿಯ ಪತಿ ಸತೀಶ್ ಕುಮಾರ್ ಮತ್ತು ಆತನ ಸ್ನೇಹಿತ ವಸಂತ ಕುಮಾರ್ ನ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಭಾನುವಾರ ಮೊಬೈಲ್ ಕರೆಯ ಆಧಾರದಲ್ಲಿ ವಿನಾಯಕ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿ.ಟೆಕ್ ಪದವೀಧರರಾಗಿರುವ ವಿನಾಯಕ ಮೂರ್ತಿ ಪಾಂಡಿಚೆರಿಯವರಾಗಿದ್ದು ಚೆನ್ನೈಯಲ್ಲಿ ಕಂಪೆನಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಗೌತಮಿ ಎಂಬ ಕಾಲೇಜು ಯುವತಿಯ ಪರಿಚಯವಾಗಿ ಪ್ರೀತಿಗೆ ತಿರುಗಿತು. ಆದರೆ ಭಿನ್ನಾಭಿಪ್ರಾಯಗಳಿಂದ ಜೋಡಿ 2012ರಲ್ಲಿ ದೂರವಾಗಿತ್ತು. ಕೊನೆಗೆ 2013ರಲ್ಲಿ ಗೌತಮಿ ತಮ್ಮ ಸಂಬಂಧಿಕ ಸತೀಶ್ ಕುಮಾರ್ ನನ್ನು ಮದುವೆಯಾಗಿದ್ದಳು.
ಮದುವೆಯಾಗಿ ಎರಡು ವರ್ಷಗಳ ಕಾಲ ವಿನಾಯಕ ಮೂರ್ತಿ ಮತ್ತು ಗೌತಮಿ ಸಂಪರ್ಕದಲ್ಲಿರಲಿಲ್ಲ. 2014ರಲ್ಲಿ ಫೇಸ್ ಬುಕ್ ಮೂಲಕ ಮತ್ತೆ ಸಂಪರ್ಕಕ್ಕೆ ಬಂದರು. ನಂತರ ವಿನಾಯಕ ಮೂರ್ತಿ ಗೌತಮಿಗೆ, ಸತೀಶ್ ಜೊತೆ ಸಂಪರ್ಕ ಕಳೆದುಕೊಂಡು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಲೇ ಇದ್ದ. ಗೌತಮಿ ಒಪ್ಪದಿದ್ದಾಗ ಆಕೆಯ ಪತಿಯನ್ನು ಕೊಂದು ಮದುವೆಯಾಗಲು ನಿರ್ಧರಿಸಿದ್ದ. 
ಆರೋಪಿ ವಿನಾಯಕ ಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT