ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 
ದೇಶ

ನೋಟ್ ನಿಷೇಧದ ವಿರುದ್ಧ "ಸುಪ್ರೀಂ" ನಲ್ಲಿ ಪಿಐಎಲ್ ದಾಖಲು!

500 ಹಾಗೂ 1000 ರು. ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಕೀಲರೊಬ್ಬರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: 500 ಹಾಗೂ 1000 ರು. ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಕೀಲರೊಬ್ಬರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ನಿರ್ಧಾರದಿಂದ ದೇಶದ ಜನತೆಗೆ ಸಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯುವಂತೆ ಸೂಚಿಸಬೇಕು  ಎಂದು ಹೇಳಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

"ದೇಶದಲ್ಲಿನ ಅಕ್ರಮ ಕಪ್ಪುಹಣವನ್ನು ಮತ್ತು ನಕಲಿ ನೋಟುಗಳ ಹಾವಳಿ ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳನ್ನು ನಿಷೇಧಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ತಮ್ಮ ಈ ನಿರ್ಧಾರಕ್ಕೆ ಅವರು  ಯಾವುದೇ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಅಲ್ಲದೆ ಜನತೆಗೆ ಯಾವುದೇ ರೀತಿಯ ಕಾಲಾವಕಾಶ ಕೂಡ ನೀಡಿಲ್ಲ. ಇದರಿಂದ ಜನತೆ ತೀವ್ರ ಕಂಗಾಲಾಗಿದ್ದು, ನಿತ್ಯ ವ್ಯವಹಾರಗಳ ವ್ಯತಿರಿಕ್ತಿ ಪರಿಣಾಮ ಬೀರುತ್ತಿದೆ. ದೇಶದ  ಆರ್ಥಿಕತೆ ಮೇಲೂ ಆದೇಶ ದುಷ್ಪರಿಣಾಮ ಬೀರುತ್ತಿದ್ದು, ಷೇರುಮಾರುಕಟ್ಟೆ ಕುಸಿದಿದೆ. ಹೀಗಾಗಿ ಕೂಡಲೇ ಆದೇಶವನ್ನು ಸರ್ಕಾರ ಹಿಂಪಡೆಯುವಂತೆ ಸೂಚನೆ ನೀಡಬೇಕು ಎಂದು ಹೇಳಿ ವಕೀಲರು ಆರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಸ್ತುತ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ನ್ಯಾಯಾಲಯ ಮಂಗಳವಾರಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ; ಚುನಾವಣಾ ಆಯೋಗ ಆದೇಶ

IPL 2026: ಮುಂಬೈಗೆ ಮತ್ತೆ ಸೋಲು, 8 ವಿಕೆಟ್ ಗಳಿಂದ ಗೆದ್ದು ಬೀಗಿದ CSK!

ಪೊಲೀಸರ ಸಮ್ಮುಖದಲ್ಲೇ ಧಮ್ಕಿ: ಸಾರಾ ಗೋವಿಂದ್ ವಿರುದ್ಧ ಚೇತನ್ ಅಹಿಂಸಾ ದೂರು, FIR ದಾಖಲು!

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!

ಪಶ್ಚಿಮ ಬಂಗಾಳ: ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ಮುಕ್ತಾಯ; ಸಂಜೆ 5 ಗಂಟೆಯವರೆಗೆ 87% ವೋಟಿಂಗ್

SCROLL FOR NEXT