ದೇಶ

ವಿಜಯ್ ಮಲ್ಯರ ಕಿಂಗ್ ಫಿಶರ್‌ಗೆ ನೀಡಿದ್ದ 1200 ಕೋಟಿ ಸಾಲ ರೈಟ್ ಆಫ್ ಮಾಡಿದ ಎಸ್‌ಬಿಐ

Vishwanath S
ನವದೆಹಲಿ: ಬೃಹತ್ ಸಾಲ ಸುಸ್ತಿಗಾರ ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ನೀಡಿದ್ದ 1200 ಕೋಟಿ ರುಪಾಯಿ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನ್ನ ಮಾಡಲು ತೀರ್ಮಾನಿಸಿದೆ.
ಕಿಂಗ್ ಫಿಶರ್ ಸೇರಿದಂತೆ 63 ಮಂದಿ ಇಚ್ಛಾಪೂರ್ವಕ ಸುಸ್ತಿದಾರರ 7 ಸಾವಿರ ಕೋಟಿ ಸಾಲ ಮನ್ನ ಮಾಡಲು ಎಸ್‌ಬಿಐ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. 
ಕಿಂಗ್ ಫಿಶರ್ ಗೆ ನೀಡಿದ್ದ 1200 ಕೋಟಿ ರುಪಾಯಿ ಮರಳಿ ಬಾರದ ಸಾಲವನ್ನು ಅಡ್ ವಾನ್ಸ್ ಅಂಡರ್ ಕಲೆಕ್ಷನ್ ಅಕೌಂಟ್ಸ್(ಎಯುಸಿಎ) ವರ್ಗಕ್ಕೆ ವರ್ಗಾಯಿಸಲಾಗಿದೆ ಮತ್ತು ಆ ಮೂಲಕ ಈ ಸುಸ್ತಿ ಸಾಲವನ್ನು ಭವಿಷ್ಯದಲ್ಲಿ ವಸೂಲಿ ಮಾಡುವ ಅವಕಾಶವನ್ನು ಮುಕ್ತವಾಗಿರಿಸಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ರೈಟ್ ಆಫ್ ಕ್ರಮದಿಂದ ಬ್ಯಾಂಕಿನ ಲೆಕ್ಕ ಪತ್ರ ಪುಸ್ತಕಗಳಲ್ಲಿ ಆ ಸಾಲವನ್ನು ಅನುತ್ಪಾದಕ ಆಸ್ತಿ(ಎನ್ಪಿಎ) ಎಂದು ಪಟ್ಟಿ ಮಾಡಲಾಗಿದೆ. ಸುಸ್ತಿ ಸಾಲವನ್ನು ರೈಟ್ ಆಫ್ ಮಾಡುವುದೆಂದರೆ ಅದನ್ನು ಮನ್ನಾ ಮಾಡಿದಂತಾಗುವುದಿಲ್ಲ. ಈ ಸುಸ್ತಿ ಸಾಲವನ್ನು ವಸೂಲಾತಿಯನ್ನು ಇನ್ನೂ ಕೂಡ ವಸೂಲಿ ಮಾಡಲು ಅವಕಾಶವಿದೆ ಎಂದು ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಹೇಳಿದರು.
SCROLL FOR NEXT