ದೇಶ

ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ನಿಷೇಧವನ್ನು ಕೋಮುವಾದವೆಂದ ಜಾಕಿರ್ ನಾಯ್ಕ್!

Srinivas Rao BV
ಮುಂಬೈ: ಉಗ್ರರಿಗೆ ಸ್ಪೂರ್ತಿಯಾಗುವ ಮೂಲಕ ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ಆರೋಪವನ್ನು ಎದುರಿಸುತ್ತಿರುವ ಇಸ್ಲಾಮ್ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್, ತನ್ನ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಮೇಲೆ ಹೇರಲಾಗಿರುವ ನಿಷೇಧವನ್ನು ಕೋಮುವಾದವೆಂದು ಆರೋಪಿಸಿದ್ದಾರೆ. 
ಐಆರ್ ಎಫ್ ಮೇಲಿನ ನಿಷೇಧ ಮುಸ್ಲಿಮರ, ಶಾಂತಿ, ಪ್ರಜಾಪ್ರಭುತ್ವ, ನ್ಯಾಯದ ಮೇಲಿನ ದಾಳಿ, ಇದರ ವಿರುದ್ಧ ಹೋರಾಟ ಮಾಡುವುದಾಗಿ ಜಾಕಿರ್ ನಾಯ್ಕ್ ತಿಳಿಸಿದ್ದಾರೆ. ಐಆರ್ ಎಫ್ ನ್ನು ಉಗ್ರ ಸಂಘಟನೆ ಎಂದು ಗುರುತಿಸಿ  ನಿಷೇಧಿಸಿರುವ ಬಗ್ಗೆ ಮೂರು ಪುಟಗಳ ಪತ್ರ ಬರೆದಿರುವ ಜಾಕಿರ್ ನಾಯ್ಕ್,  ಐಆರ್ ಎಫ್ ನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ತನಿಖೆ, ವರದಿಗಳು ಸಲ್ಲಿಕೆಯಾಗುವುದಕ್ಕೂ ಮುನ್ನವೇ ಕೆಲವು ತಿಂಗಳ ಹಿಂದೆ ತೆಗೆದುಕೊಂಡ ನಿರ್ಧಾರ ಕೋಮುವಾದದ ನಿರ್ಧಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಕಳೆದ 25 ವರ್ಷಗಳಿಂದ ಕಾನೂನಾತ್ಮಕವಾಗಿಯೇ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯನ್ನು ನಿಷೇಧಿಸಿರುವುದು ಭಾರತಕ್ಕೆ ದುರದೃಷ್ಟಕರ ಸಂಗತಿ ಎಂದು ಜಾಕಿರ್ ನಾಯ್ಕ್ ಪತ್ರದಲ್ಲಿ ಹೇಳಿದ್ದಾರೆ. 
SCROLL FOR NEXT