ದೇಶ

ಬಾದಲ್ ಸರ್ಕಾರದ ಸಹಾಯವಿಲ್ಲದೆ ಶಸ್ತ್ರಾಸ್ತ್ರಧಾರಿಗಳು ಒಳನುಗ್ಗಲು ಸಾಧ್ಯವಿಲ್ಲ: ಕ್ಯಾಪ್ಟನ್ ಅಮರಿಂದರ್

Manjula VN

ಸಂಗ್ರೂರ್: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ನಾಬಾ ಜೈಲು ಪ್ರಕರಣ ಉದಾಹರಣೆಯಾಗಿದೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಅತೀ ಹೆಚ್ಚು ಭದ್ರತೆಯುಳ್ಳ ಜೈಲಿನೊಳಗೆ ಶಸ್ತ್ರಾಸ್ತ್ರಧಾರಿಗಳು ನುಗ್ಗಿ ಉಗ್ರನ್ನು ಬಂಧನ ಮುಕ್ತಗೊಳಿಸಿದ್ದಾರೆ. ಘಟನೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಎಂದು ಹೇಳಿದ್ದಾರೆ.

ಜೈಲಿನಲ್ಲಿ ಉಗ್ರರನ್ನು ಬಂಧನ ಮುಕ್ತಗೊಳಿಸಿ ಕರೆದುಕೊಂಡು ಹೋಗಿದ್ದಾರೆಂದರೆ ಪಂಜಾಬ್ ನಲ್ಲು ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿರುವುದ್ದಾರೆಂಬುದನ್ನು ಸೂಚಿಸುತ್ತದೆ. ಶಸ್ತ್ರಾಸ್ತ್ರಧಾರಿಗಳು ಭೀತಿಯಿಲ್ಲದೆಯೇ ಜೈಲಿನ ಒಳನುಗ್ಗಿದ್ದಾರೆ. ಉಗ್ರರನ್ನು ಬಂಧನ ಮುಕ್ತಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಯಾರೂ ತಡೆದಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಘಟನೆಯೊಂದು ಪೂರ್ವ ನಿಯೋಜಿತವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT