ದೇಶ

ಪೋಷಕರ ಮನೆಯಲ್ಲಿ ವಾಸಿಸುವ ಕಾನೂನಾತ್ಮಕ ಹಕ್ಕು ಮಗನಿಗೆ ಇಲ್ಲ: ದೆಹಲಿ ಹೈಕೋರ್ಟ್

Lingaraj Badiger
ನವದೆಹಲಿ: ತನ್ನ ವೈವಾಹಿಕ ಸ್ಥಾನಮಾನವನ್ನು ಪರಿಗಣಿಸದ ಪುತ್ರನಿಗೆ ಸ್ವಯಾರ್ಜಿತ ಪೋಷಕರ ಮನೆಯಲ್ಲಿ ವಾಸಿಸುವ ಕಾನೂನಾತ್ಮಕ ಹಕ್ಕು ಇಲ್ಲ. ಕೇವಲ ಅವರ ಅನುಕಂಪದ ಮೇಲೆ ವಾಸಿಸಬಹುದಾಗಿದೆ ಎಂದು ಮಂಗಳವಾರ ದೆಹಲಿ ಹೈಕೋರ್ಟ್ ಹೇಳಿದೆ.
ಸೌಹಾರ್ದ ಸಂಬಂಧ ಹೊಂದಿರುವವರೆಗೆ ಮಾತ್ರ ಪೋಷಕರ ಸ್ವಯಾರ್ಜಿತ ಮನೆಯಲ್ಲಿ ಮಗ ವಾಸಿಸಬಹುದಾಗಿದೆ. ಹಾಗಂತ ಜೀವನಪೂರ್ತಿ ಅವರಿಗೆ ಹೊರೆಯಾಗಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಗ ಮತ್ತ ಸೊಸೆಗೆ ಪೋಷಕರ ಮನೆ ಖಾಲಿ ಮಾಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ರಾಣಿ ಅವರು, ಆ ಮನೆ ಪೋಷಕರ ಸ್ವಯಾರ್ಜಿತ ಆಸ್ತಿಯಾಗಿದ್ದರೆ, ವಿವಾಹಿತ ಅಥವಾ ಅವಿವಾಹಿತ ಮಗ ಕೇವಲ ಅನುಕಂಪದ ಮೇಲೆ ಮಾತ್ರ ಅವರೊಂದಿಗೆ ವಾಸಿಸಬಹುದು. ಅದೂ ಪೋಷಕರ ಒಪ್ಪಿಗೆ ಇದ್ದರೆ ಮಾತ್ರ ಎಂದು ಹೇಳಿದ್ದಾರೆ.
ಪೋಷಕರಿಬ್ಬರೂ ಹಿರಿಯ ನಾಗರಿಕರಾಗಿದ್ದು, ಮಗನ ಮದುವೆಯ ನಂತರ ತಮ್ಮ ಜೀವನ ನರಕವಾಗಿದ್ದು, ಈ ಸಂಬಂಧ 2007ರಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಅಲ್ಲದೆ 2012ರಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯಾದ ಮನೆಯನ್ನು ಬಿಟ್ಟು ಹೋಗುವಂತೆ ಸೂಚಿಸಿದ್ದೇವೆ. ಆದರೆ ಇದುವರೆಗೂ ಮನೆ ಖಾಲಿ ಮಾಡಿಲ್ಲ ಎಂದು ನೊಂದ ಪೋಷಕರು ಕೋರ್ಟ್ ಗೆ ತಿಳಿಸಿದ್ದಾರೆ.
SCROLL FOR NEXT