ಸುರೇಂದ್ರ ಕೋಲಿ 
ದೇಶ

ನಿಥಾರಿ ಕೇಸ್: ನಂದಾದೇವಿ ಕೊಲೆಗಾರ ಸುರೇಂದ್ರ ಕೋಲಿಗೆ ಗಲ್ಲು

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿಥಾರಿ ಸರಣಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಸುರೇಂದ್ರ ಕೋಲಿಗೆ ನಂದಾ ದೇವಿ...

ಗಾಜಿಯಾಬಾದ್: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿಥಾರಿ ಸರಣಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಸುರೇಂದ್ರ ಕೋಲಿಗೆ ನಂದಾ ದೇವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿದೆ.
2006ರಲ್ಲಿ ನಡೆದ ನಂದಾದೇವಿ ಕೊಲೆ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಗಾಜಿಯಾಬಾದ್ ಸಿಬಿಐ ಕೋರ್ಟ್ ಕಳೆದ ಅಕ್ಟೋಬರ್ 5ರಂದು ಆರೋಪಿ ಸುರೇಂದ್ರ ಕೋಲಿ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ನಂದಾದೇವಿ ಮತ್ತು ರಿಂಪಾ ಹಲ್ದರ್ ಅವರ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕೋಲಿ ಹಲವು ಬಾಲಕಿಯರ ಮೇಲೆ ಲೈಂಗಿಕ ಹಲ್ಲೆ ನಡೆಸಿ ಬಳಿಕ ಅವರನ್ನು ಕೊಲ್ಲುತ್ತಿದ್ದ ಎಂಬ ಆರೋಪ ಇತ್ತು. ಕೊಂದ ಬಳಿಕ ಅವರನ್ನು ಭಕ್ಷಿಸುತ್ತಿದ್ದ ಎಂಬ ಆರೋಪವೂ ಕೋಲಿ ಮೇಲೆ ಇದೆ. 
2004ರಿಂದ ಹಲವಾರು ಮಕ್ಕಳು ಕಣ್ಮರೆಯಾಗಿರುವ ಪ್ರಕರಣಗಳಲ್ಲಿ ಕೋಲಿ ಕೈವಾಡ ಇರುವ ಬಗ್ಗೆ ಇಬ್ಬರು ನಿಥಾರಿ ನಿವಾಸಿಗಳು ಸುಳಿವು ನೀಡಿದ ಬಳಿಕ ನಂದಾ ದೇವಿ ಕೊಲೆ ಪ್ರಕರಣ ಹಾಗೂ ಇತರ ಸರಣಿ ಹತ್ಯೆಗಳು ಬೆಳಕಿಗೆ ಬಂದಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel