ಬಾಲಕಿ ಆರಾಧನಾ 
ದೇಶ

68 ದಿನಗಳ ದೀರ್ಘ ಉಪವಾಸ: ವ್ರತ ಬಳಿಕ ಮೃತಪಟ್ಟ 13ರ ಬಾಲಕಿ

ಜೈನ ಸಂಪ್ರದಾಯದಂತೆ ಚೌಮಾಸ ಪವಿತ್ರ ಅವಧಿಯಲ್ಲಿ 68 ದಿನ ಉಪವಾಸ ಕೈಗೊಂಡಿದ್ದ 13 ವರ್ಷದ ಬಾಲಕಿ ವ್ರತ ಪೂರೈಸಿದ ಬಳಿಕ ಸಾವನ್ನಪ್ಪಿರುವುದಾಗಿ...

ಹೈದರಾಬಾದ್: ಜೈನ ಸಂಪ್ರದಾಯದಂತೆ ಚೌಮಾಸ ಪವಿತ್ರ ಅವಧಿಯಲ್ಲಿ 68 ದಿನ ಉಪವಾಸ ಕೈಗೊಂಡಿದ್ದ 13 ವರ್ಷದ ಬಾಲಕಿ ವ್ರತ ಪೂರೈಸಿದ ಬಳಿಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 
68 ದಿನಗಳ ಸುದೀರ್ಘ ಉಪವಾಸ ಬಳಿಕ ಅಸ್ವಸ್ಥಗೊಂಡಿದ್ದ ಎಂಟನೇ ತರಗತಿ ವಿದ್ಯಾರ್ಥಿನಿ ಆರಾಧನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆರಾಧನಾ ಹೃದಯಸ್ಥಂಭನದಿಂದ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. 
ಆರಾಧನಾಳ ಅಂತ್ಯಕ್ರಿಯೆಯಲ್ಲಿ ಕನಿಷ್ಠ 600 ಮಂದಿ ಪಾಲ್ಗೊಂಡಿದ್ದು, ಎಲ್ಲರೂ ಆಕೆಯನ್ನು ಬಾಲ ತಪಸ್ವಿ ಎಂದು ಶ್ಲಾಘಿಸಿದರು. ಅಂತ್ಯಯಾತ್ರೆಯನ್ನು ಶೋಭಾಯಾತ್ರೆ ಎಂದು ಕರೆಯಲಾಗಿತಂತೆ.
ಆರಾಧನ ಈ ಹಿಂದೆ ಇದೇ ರೀತಿ 41 ದಿನಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದಳು ಎಂದು ಹೇಳಲಾಗಿದೆ. 
ಆರಾಧನಾಳ ಕುಟುಂಬ ಚಿನ್ನಾಭರಣದ ವ್ಯವಹಾರ ಮಾಡುತ್ತಿದ್ದು ಸಿಕಂದರಾಬಾದ್ ನ ಪಾಟ್ ಬಜಾರ್ ಪ್ರದೇಶದಲ್ಲಿ ಅಂಗಡಿ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್