ನವಜೋತ್ ಕೌರ್ ಸಿಧು 
ದೇಶ

ನವಜೋತ್ ಕೌರ್ ಸಿಧು ಸಹ ಬಿಜೆಪಿಗೆ ರಾಜಿನಾಮೆ

ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್...

ನವದೆಹಲಿ: ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಶನಿವಾರ ಪಕ್ಷಕ್ಕೆ ರಾಜಿನಾಮೆ ನೀಡಿದ್ದು, ಬಿಜೆಪಿ ಸಹ ಅವರ ರಾಜಿನಾಮೆಯನ್ನು ಅಂಗೀಕರಿಸಿದೆ.
ರಾಜ್ಯಸಭಾ ಸದಸ್ಯರಾಗಿದ್ದ ನವಜೋತ್ ಸಿಂಗ್ ಸಿಧು ಅವರು ಬಿಜೆಪಿ ತೊರೆದು ಆವಾಜ್ ಇ ಪಂಜಾಬ್ ಪಕ್ಷ ಸ್ಥಾಪಿಸಿದ ನಂತರ ಅವರ ಪತ್ನಿ ಸಹ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಇತ್ತೀಚಿಗಷ್ಟೇ ಸಿಧು ಅವರ ಮತ ಕ್ಷೇತ್ರದ ವಲ್ಲಾ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ನಾಯಕರು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ನವಜೋತ್ ಕೌರ್ ಸಿಧು ಅವರು ಗೈರು ಆಗಿದ್ದರು. ಅಲ್ಲದೆ ಬಿಜೆಪಿ ಕಾರ್ಯಕ್ರಮಕ್ಕೂ ಗೈರು ಆಗಿದ್ದರು.
ನವಜೋತ್ ಕೌರ್ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಆದರೆ ಶಾಸಕ ಸ್ಥಾನಕ್ಕೆ ಇನ್ನೂ ರಾಜಿನಾಮೆ ನೀಡಿಲ್ಲ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಿಂದ ಅವರನ್ನು ದೂರವಿಡಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಸಿಟಿವಿ ನಾಪತ್ತೆ, SOP ನಿರ್ಲಕ್ಷ್ಯ, ಶೌಚಾಲಯದಲ್ಲಿ ಹಣ!: ರಾಮ ಮಂದಿರ ದೇಣಿಗೆ ಕುರಿತು ಎಸ್‌ಐಟಿ ತನಿಖೆಯಲ್ಲಿ 'ವಂಚನೆ'ಯ ಜಾಲ ಬಯಲು!

'ಅವ್ರು ನಿಜವಾದ ರಾಮ ಭಕ್ತರಲ್ಲ: ದೇಣಿಗೆ ವಿವಾದ, ಪ್ರಧಾನಿ ಮೋದಿಯ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್!

Ketan Agarwal Murder case: ಕೇತನ್ ತಲೆ ಜಜ್ಜಿದ್ರಾ ಪಾಪಿಗಳು? ಮೃತದೇಹ ನೋಡಿದ್ರೂ ಶಾಂತವಾಗಿದ್ದ ಸಿಯಾ, ಸಿಬ್ಬಂದಿ ಸ್ಫೋಟಕ ಮಾಹಿತಿ!

'ಲವರ್ ಅಲ್ಲ.. ಬಾಂಬರ್..'; ಕಾರಿನಲ್ಲೇ ಯುವತಿಗೆ ಚಾಕು ಇರಿತ, ಪೆಟ್ರೋಲ್ ಬಾಂಬ್ ಸ್ಫೋಟಿಸಿದ ಭಗ್ನ ಪ್ರೇಮಿ, Video

IPL: ರಜತ್ ಪಾಟಿದಾರ್ ಬಳಿಕ RCB ನಾಯಕ ಯಾರು? ಭಾರೀ ಸುಳಿವು ನೀಡಿದ ಫ್ರಾಂಚೈಸಿ, ಕನ್ನಡಿಗರು ಫುಲ್ ಖುಷ್!