ಸಾಂದರ್ಭಿಕ ಚಿತ್ರ 
ದೇಶ

ಪತ್ನಿ ಸತ್ತರೂ ಕೊಳೆತ ಶವದೊಂದಿಗೆ ಜೀವನ ನಡೆಸುತ್ತಿದ್ದ 90 ವರ್ಷದ ವೃದ್ಧ!

ಪತ್ನಿ ಸತ್ತು ಹಲವು ದಿನಗಳೇ ಕಳೆದರೂ ಕೊಳೆತ ಶವದೊಂದಿಗೆಯೇ 90 ವರ್ಷದ ವೃದ್ಧನೊಬ್ಬ ಜೀವನ ನಡೆಸುತ್ತಿದ್ದ ಘಟನೆಯೊಂದು ಆಗ್ನೇಯ ದೆಹಲಿಯ ಕಲ್ಕಜಿ ಪ್ರದೇಶದಲ್ಲಿ...

ನವದೆಹಲಿ: ಪತ್ನಿ ಸತ್ತು ಹಲವು ದಿನಗಳೇ ಕಳೆದರೂ ಕೊಳೆತ ಶವದೊಂದಿಗೆಯೇ 90 ವರ್ಷದ ವೃದ್ಧನೊಬ್ಬ ಜೀವನ ನಡೆಸುತ್ತಿದ್ದ ಘಟನೆಯೊಂದು ಆಗ್ನೇಯ ದೆಹಲಿಯ ಕಲ್ಕಜಿ ಪ್ರದೇಶದಲ್ಲಿ ನಡೆದಿದೆ.

ಆನಾರೋಗ್ಯದಿಂದ ಬಳಲುತ್ತಿದ್ದ ಗೋಪಿ ಜೆಥಾನಿ (85) ಎಂಬ ವೃದ್ಧೆ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾರೆ. ದಂಪತಿಗಳು ಫ್ಲ್ಯಾಟ್ ನಲ್ಲಿ ಜೀವನ ನಡೆಸುತ್ತಿದ್ದು, ಇವರಿಗೆ ಮಕ್ಕಳಿಲ್ಲದಿರುವುದು ತನಿಖೆ ವೇಳೆ ತಿಳಿದುಬಂದಿದೆ. ಈ ಕಾರಣದಿಂದಲೇ ಆಕೆಯ ಪತಿ ಗೋವಿಂದ್ ರಾಮ್ (90) ಅವರು ಈ ವಿಚಾರವನ್ನು ಯಾರಿಗೂ ತಿಳಿಸದೆಯೇ ಸತ್ತ ಪತ್ನಿಯ ಶವದೊಂದಿಗೆ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದಂಪತಿಗಳ ಫ್ಲ್ಯಾಟ್ ನಿಂದ ದುರ್ವಾಸನೆ ಬರುತ್ತಿದ್ದರಿಂದ ನೆರೆಮನೆಯವರು ಮಾಹಿತಿ ನೀಡಿದ್ದರು. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಗೋಪಿ ಜೆಥಾನಿಯವರ ಸಾವು ಸಹಜ ಸಾವೇ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನನ್ನ ಪತ್ನಿ ಕಳೆದ ಕೆಲ ದಿನಗಳಿಂದಲೂ ಹಾಸಿಗೆ ಹಿಡಿದಿದ್ದಳು. ನಿನ್ನೆ ಹಾಸಿಗೆಯಿಂದ ಕೆಳಗೆ ಬಿದ್ದಿದ್ದಳು. ನಂತರ ಮೇಲೆ ಏಳಲೇ ಇಲ್ಲ ಎಂದು ಗೋವಿಂದ್ ರಾಮ್ ಅವರು ವಿಚಾರಣೆ ವೇಳೆ ಹೇಳಿದ್ದಾರೆ. ಪ್ರಸ್ತುತ ರಾಮ್ ಅವರು ನಿಶ್ಯಕ್ತಿಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಏಮ್ಸ್'ಗೆ ಕಳುಹಿಸಲಾಗಿದೆ ಎಂದು ಡಿಸಿಫಿ ರೋಮಿಲ್ ಬಾನಿಯಾ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT