ಪಾಟ್ನ: ಸೀಮಿತ ದಾಳಿ ನಂತರ ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ತಂಡ ಮಂಗಳವಾರ ಐವರು ಶಂಕಿತ ಉಗ್ರರನ್ನು ಮಂಗಳವಾರ ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.
ನೇಪಾಳ ಮಾರ್ಗವಾಗಿ ಭಾರತದೊಳಗೆ ಈ ಐವರು ಶಂಕಿತ ಉಗ್ರರು ನುಸುಳಿರುವ ಸಾಧ್ಯತೆಗಳಿದ್ದು. ಐವರ ಪೈಕಿ ಇಬ್ಬರು ಪಾಕಿಸ್ತಾನ ಮೂಲದ ಶಂಕಿತರು ಎಂದು ಹೇಳಲಾಗುತ್ತಿದೆ. ಉಳಿದ ಮೂವರು ಶಂಕಿತ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಶಂಕಿತ ಉಗ್ರರಿಂದ ಪಾಟ್ನಾದ ಪ್ರಮುಖ ಪ್ರದೇಶಗಳ ಮ್ಯಾಪ್ ಗಳು ಹಾಗೂ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಬಂಧಿತ ಶಂಕಿತ ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.