ದೇಶ

ಪ್ಯಾಂಪೋರ್ ನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ, ಹತ್ಯೆಯಾದ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರು: ಸೇನೆ

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿ ಬಳಿ ಕಳೆದ ಮೂರು ದಿನಗಳಿಂದ ಉಗ್ರರು- ಭಾರತೀಯ ಸೇನೆ ನಡುವೆ ನಡೆಯುತ್ತಿದ್ದ ಗುಂಡಿನ ಕಾಳಗ ಅಂತ್ಯಗೊಂಡಿದ್ದು, ಸೇನಾ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಸೇನೆ ಹೇಳಿದೆ.
ಸೇನಾಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಸೇನಾ ಅಧಿಕಾರಿ ಅಶೋಕ್ ನರುಲಾ ಸರ್ಕಾರಿ ಕಟ್ಟಡಕ್ಕೆ ಹೆಚ್ಚು ಹಾನಿ ಸಂಭವಿಸದಂತೆ ಎಚ್ಚರಿಕೆ ವಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಎರಡು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಗ್ರರಿಂದ ವಶಪಡಿಸಿಕೊಳ್ಳಲಾದ ಉಳಿದ ವಸ್ತುಗಳ ಬಗ್ಗೆ ನಂತರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಕಟ್ಟಡಕ್ಕೆ ಹಾನಿ ಸಂಭವಿಸದಂತೆ ಸಾಕಷ್ಟು ಎಚ್ಚರ ವಹಿಸಲಾಗಿತ್ತು. ಕಟ್ಟಡದಲ್ಲಿ 60 ಕೊಠಡಿಗಳಿದ್ದ ಕಾರಣ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕಾಯಿತು ಎಂದು ಸೇನಾ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹತ್ಯೆಯಾಗಿರುವ ಉಗ್ರರು ಮೇಲ್ನೋಟಕ್ಕೆ ಲಷ್ಕರ್ ಉಗ್ರ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿದೆ ಎಂದು ಸೇನೆ ಹೇಳಿದೆ. ಜಮ್ಮು-ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಏಳು ಅಂತಸ್ತಿನ ಸರ್ಕಾರಿ ಕಚೇರಿಯಲ್ಲಿ ಉಗ್ರರು ಅಡಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಅ.10 ರಿಂದ ಸೇನಾ ಕಾರ್ಯಚರಣೆ ಪ್ರಾರಂಭವಾಗಿತ್ತು.

SCROLL FOR NEXT