ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭಾರತೀಯ ಯೋಧ ನಮ್ಮ ವಶದಲ್ಲಿರುವುದು ನಿಜ: ಪಾಕಿಸ್ತಾನ ಸ್ಪಷ್ಟನೆ

ಆಕಸ್ಮಿಕವಾಗಿ ಗಡಿ ದಾಟಿದ್ದ ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಅವರು ಪಾಕಿಸ್ತಾನ ಸೇನೆಯ ವಶದಲ್ಲಿರುವುದು ಶುಕ್ರವಾರ ಖಚಿತವಾಗಿದೆ...

ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್
Manjula VN
Updated On : 14 Oct 2016, 2:15 am

ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿದ್ದ ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಅವರು ಪಾಕಿಸ್ತಾನ ಸೇನೆಯ ವಶದಲ್ಲಿರುವುದು ಶುಕ್ರವಾರ ಖಚಿತವಾಗಿದೆ.

ಗಡಿಯಲ್ಲಿ ಗುಸ್ತು ತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಚಂದು ಬಾಬುಲಾಲ್ ಚೌಹಾಣ್ ಅವರು ಗಡಿ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರವೇಶ ಮಾಡಿದ್ದರು. ಇದರಂತೆ ಚಂದು ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದುಕೊಂಡಿತ್ತು.

ಮಹಾರಾಷ್ಟ್ರದ ಧುಲೆಯ 37ನೇ ರಾಷ್ಟ್ರೀಯ ರೈಫಲ್ಸ್ ನ ಯೋಧ ಚಂದು ಬಾಬುಲಾಲ್ ಚೌಹಾಣ್ ಕುರಿತಂತೆ ಪಾಕಿಸ್ತಾನ ಸೇನೆಯ ಡೈರೆಕ್ಟರ್ ಜನರಲ್ ಸ್ಪಷ್ಟನೆ ನೀಡಿದ್ದು, ಭಾರತೀಯ ಯೋಧ ಪಾಕಿಸ್ತಾನ ಸೇನೆಯ ವಶದಲ್ಲಿರುವುದು ಸತ್ಯವೆಂದು ಹೇಳಿದ್ದಾರೆಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಚಂದು ಬಾಬುಲಾಲ್ ಅವರು ಪಾಕಿಸ್ತಾನ ಸೇನೆಯ ವಶದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಆಘಾತಗೊಂಡಿದ್ದ ಚಂದು ಅವರ ಅಜ್ಜಿ ಲೀಲಾ ಬಾಯಿಯವರು ಕೆಲ ದಿನಗಳ ಹಿಂದಷ್ಟೇ ವಿಧಿವಶರಾಗಿದ್ದಾರು. ಇದೀಗ ಪಾಕಿಸ್ತಾನ ವಶದಲ್ಲಿರುವ ಭಾರತೀಯ ಯೋಧನನ್ನು ಮರಳಿ ತಾಯಿನಾಡಿಗೆ ತರಲು ಅಧಿಕಾರಿಗಳು ಸಾಕಷ್ಟು ಶ್ರಮ ಪಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments