'ಥಮ್ಸ್ ಅಪ್' ರಾಯಭಾರಿ ಸ್ಥಾನದಿಂದ ಸಲ್ಮಾನ್ ಕೈಬಿಟ್ಟ ಕೋಕಾಕೋಲಾ 
ದೇಶ

'ಥಮ್ಸ್ ಅಪ್' ರಾಯಭಾರಿ ಸ್ಥಾನದಿಂದ ಸಲ್ಮಾನ್ ಕೈಬಿಟ್ಟ ಕೋಕಾಕೋಲಾ

ತಂಪು ಪಾನೀಯ ಥಮ್ಸ್ ಅಪ್ ನ ಮುಖ್ಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೋಕಾಕೋಲಾ ಕಂಪನಿ ಕೈಬಿಟ್ಟಿದೆ...

ನವದೆಹಲಿ: ತಂಪು ಪಾನೀಯ ಥಮ್ಸ್ ಅಪ್ ನ ಮುಖ್ಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೋಕಾಕೋಲಾ ಕಂಪನಿ ಕೈಬಿಟ್ಟಿದೆ.

ಕೋಕಾಕೋಲಾ ಮತ್ತು ಸಲ್ಮಾನ್ ನಡುವೆ ಇದ್ದ 4 ವರ್ಷಗಳ ಒಪ್ಪದ ಕಳೆದ ತಿಂಗಳಷ್ಟೇ ಕೊನೆಗೊಂಡಿತ್ತು. ಇದಲ್ಲದೆ ಸಲ್ಮಾನ್ ಕೂಡ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋವೊಂದನ್ನು ಕಾರ್ಯನಿರತರಾಗಿದ್ದು, ಈ  ಹಿನ್ನೆಲೆಯಲ್ಲಿ ಸಲ್ಮಾನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರೆಸದಿರಲು ಕಂಪನಿ ತೀರ್ಮಾನಿಸಿದೆ. ಅಲ್ಲದೆ, ರಾಯಭಾರಿ ಸ್ಥಾನಕ್ಕೆ ನಟ ರಣವೀರ್ ಸಿಂಗ್ ಅವರನ್ನು ಕರೆತರಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

2012ರಲ್ಲಿ ನಟ ಅಕ್ಷಯ್ ಕುಮಾರ್ ಜೊತೆಗಿನ ಒಪ್ಪಂದ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಥಮ್ಸ್ ಅಪ್ ಜಾಹೀರಾತಿನಲ್ಲಿ ಭಾಗವಹಿಸಲು ನಟ ಸಲ್ಮಾನ್ ಖಾನ್ ಅವರು ರು.5 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರು. ಇದೀಗ ಸಲ್ಮಾನ್ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಪೂರ್ಣಗೊಂಡ ಬಳಿಕ ರಣವೀರ್ ಸಿಂಗ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಂಪನಿ ಕಾರ್ಯನಿರತವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪನಿ ನಿರಾಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT