ಇಸ್ಲಾಮಾಬಾದ್: ಕಾಶ್ಮೀರ ಪ್ರತ್ಯೇಕತಾವಾದಿ ಸಯೀದ್ ಸಲಾಲುದ್ದೀನ್ ಜಮ್ಮು-ಕಾಶ್ಮೀರ ಪ್ರತ್ಯೇಕತೆಗಾಗಿ ಪಾಕ್ ಸೇನೆಯ ನೆರವು ಕೋರಿದ್ದಾನೆ.
ಕಾಶ್ಮೀರ ವಿವಾದ ಮಾತುಕತೆ ಮೂಲಕ ಬಗೆಹರಿಯುವುದಿಲ್ಲ. ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಸೇನಾ ನೆರವು ನೀಡಬೇಕು ಎಂದು ಪ್ರತ್ಯೇಕತಾವಾದಿ ನಾಯಕ ಸಲಾಲುದ್ದೀನ್ ಒತ್ತಾಯಿಸಿದ್ದಾನೆ. ಮುಜಾಹಿದ್ದೀನ್ ಗೆ ಪಾಕ್ ಸೇನಾ ನೆರವು ದೊರೆತರೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವುದು ಮಾತ್ರವಲ್ಲದೆ ಭಾರತದ ನಕಾಶೆಯೂ ಬದಲಾಗುತ್ತದೆ ಎಂದು ಯುನೈಟೆಡ್ ಜಿಹಾದ್ ಕೌನ್ಸಿಲ್( ಯುಜೆಸಿ) ಅಧ್ಯಕ್ಷ ಸಲಾಲುದ್ದೀನ್ ಪಾಕ್ ಸೇನೆಗೆ ಮನವಿ ಮಾಡಿದ್ದಾನೆ. ಯಾವ ರೀತಿಯ ಸೇನಾ ನೆರವು ಬೇಕೆಂಬುದನ್ನು ತಿಳಿಸಲು ನಿರಾಕರಿಸಿರುವ ಪ್ರತ್ಯೇಕತಾವಾದಿ, ವಿಶ್ವಸಮುದಾಯ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದರೆ ಸಶಸ್ತ್ರ ಹೋರಾಟ ಒಂದೇ ನಮ್ಮ ಮುಂದಿರುವ ಆಯ್ಕೆ ಎಂದು ಪ್ರತ್ಯೇಕತಾವಾದಿ ನಾಯಕ ಸಲಾಲುದ್ದೀನ್ ಎಚ್ಚರಿಸಿದ್ದಾನೆ. ಮ್ಮು-ಕಾಶ್ಮೀರದ ಬಡ್ಗಮ್ ಜಿಲ್ಲೆಯವನಾಗಿರುವ ಸಲಾಲುದ್ದೀನ್, 1987 ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಸಲಾಲುದ್ದೀನ್ ನ ಸಂಘಟನೆಗೆ ಪಾಕಿಸ್ತಾನದ ಬೆಂಬಲವಿದೆ.