ವೈಎಸ್ಆರ್ ಜಗನ್ ಮೋಹನ್ 
ದೇಶ

ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ವೈಎಸ್ ಜಗನ್ ಮೋಹನ್

ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಲಿಸುತ್ತಿದ್ದ ಕಾರು...

ಹೈದರಾಬಾದ್: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಲಿಸುತ್ತಿದ್ದ ಕಾರು ಪಂಕ್ಚರ್ ಆಗಿ  ತನ್ನ ದಿಕ್ಕು ಬದಲಿಸಿ ಪೊದೆಗೆ ಹೋಗಿ ಗುದ್ದಿ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಆಂಧ್ರ ಪ್ರದೇಶದ ಕರ್ನೂಲಿನಿಂದ ಹೈದರಾಬಾದಿಗೆ ಬರುತ್ತಿದ್ದಾಗ ಜಗನ್ ಮತ್ತವರ ಬೆಂಬಲಿಗರು ಕಾರಿನಲ್ಲಿ ಶಂಶಬಾದ್ ಮಂಡಲ್ ನಲ್ಲಿನ ಪಲಮಕುಲ ತಲುಪಿದ್ದರು. ಆಗ ಕಾರಿನ ಒಂದು ಚಕ್ರ ಪಂಕ್ಚರ್ ಆಯಿತು. ಚಾಲಕ ಕೂಡಲೇ ಬ್ರೇಕ್ ಹಾಕಿದರು. ಆಗ ಕಾರು ರಸ್ತೆ ಬಿಟ್ಟು ಬದಿಯ ಪೊದೆಗೆ ಹೋಗಿ ಗುದ್ದಿತು. 
ಚಾಲಕರ ಸಮಯ ಪ್ರಜ್ಞೆಯಿಂದಾಗಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಗನ್ ಮೋಹನ್ ಅವರು ಕೂದಳೆಲೆ ಅಂತರದಲ್ಲಿ ಅಪಘಾತದಿಂದ ಪಾರಾಗುವುದು ಇದು ಎರಡನೇ ಸಲ. ಈ ಮೊದಲು ಆಂಧ್ರದ ಪ್ರಕಾಶಂ ಜಿಲ್ಲೆಗೆ ಹೋಗುತ್ತಿದ್ದಾಗ ಜಗನ್ ಅವರ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿತ್ತು. ಆಗಲೂ ಜಗನ್ ಅವರು ಯಾವುದೇ ಗಾಯಗಳಾಗದೆ ಬಚಾವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!