ನವದೆಹಲಿ: ದೆಹಲಿಯ ರಸ್ತೆಯಲ್ಲಿ ನೀರು ನಿಂತಿರುವುದನ್ನು ತಡೆಗಟ್ಟಲು ವಿಫಲವಾಗಿರುವುದಕ್ಕೆ ದೆಹಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಆದರೆ ದೆಹಲಿ ಹೈಕೋರ್ಟ್ ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಗೆ ಲೆಫ್ಟಿನೆಂಟ್ ಗೌರ್ನರ್ ಅವರ ಸರ್ಕಾರವಾಗಿದ್ದರೆ ಸಮಸ್ಯೆ ಬಗ್ಗೆ ಅವರಿಗೆ ಸಮನ್ಸ್ ಜಾರಿ ಮಾಡಿ ಎಂದು ಹೇಳಿದ್ದಾರೆ. ಒಂದು ವೇಳೆ ದೆಹಲಿಯ ರಸ್ತೆಗಳಲ್ಲಿ ನೀರು ನಿಂತಿರುವುದನ್ನು ತಡೆಗಟ್ಟಲು ಸಾಧ್ಯವಾಗದೆ ಇದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್ ಹೈಕೋರ್ಟ್ ಲೆಫ್ಟಿನೆಂಟ್ ಗೌರ್ನರ್ ಅವರನ್ನು ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥರೆಂದು ಹೇಳುತ್ತದೆ. ಆದರೆ ಮುಖ್ಯಮಂತ್ರಿಯನ್ನು ಕೆಲಸ ಮಾಡಲು ಹೇಳುತ್ತದೆ ಇದು ವಿಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.