ಮಂತ್ರಿಗಿರಿಯಿಂದ ವಜಾಗೊಂಡ ಆಪ್ ಶಾಸಕ ಸಂದೀಪ್ ಕುಮಾರ್ (ಸಂಗ್ರಹ ಚಿತ್ರ) 
ದೇಶ

ಸಂದೀಪ್ ಕುಮಾರ್ ಸೆಕ್ಸ್ ಟೇಪ್ ತುಂಬಾ ವರ್ಷಗಳ ಹಿಂದಿನದ್ದು: ಮಾಧ್ಯಮ ವರದಿ

ಸಚಿವ ಸ್ಥಾನಕ್ಕೆ ಕುತ್ತು ತಂದ ಆಪ್ ಶಾಸಕ ಸಂದೀಪ್ ಕುಮಾರ್ ಅವರ ಸೆಕ್ಸ್ ಟೇಪ್ ಇತ್ತೀಚಿನದಲ್ಲ, ತುಂಬಾ ವರ್ಷಗಳ ಹಿಂದಿನದ್ದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನವದೆಹಲಿ: ಸಚಿವ ಸ್ಥಾನಕ್ಕೆ ಕುತ್ತು ತಂದ ಆಪ್ ಶಾಸಕ ಸಂದೀಪ್ ಕುಮಾರ್ ಅವರ ಸೆಕ್ಸ್ ಟೇಪ್ ಇತ್ತೀಚಿನದಲ್ಲ, ತುಂಬಾ ವರ್ಷಗಳ ಹಿಂದಿನದ್ದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಬಗ್ಗೆ ಸ್ವತಃ ಮಾಜಿ ಸಚಿವ ಸಂದೀಪ್ ಕುಮಾರ್ ಅವರ ಆಪ್ತರು ಖಾಸಗಿ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಆ ಟೇಪ್ ಕನಿಷ್ಠ 6ರಿಂದ7 ವರ್ಷಗಳ ಹಿಂದಿನ ಟೇಪ್ ಎಂದು ಹೇಳಿಕೊಂಡಿದ್ದಾರೆ ಎಂದು  ವಾಹಿನಿ ವರದಿ ಮಾಡಿದೆ. ಪ್ರಸ್ತುತ ಚಾನೆಲ್ ಗಳಲ್ಲಿ ಪ್ರಸಾವಾಗುತ್ತಿರುವ ಟೇಪ್ 6 ರಿಂದ 7 ವರ್ಷಗಳಷ್ಟು ಹಿಂದಿನದ್ದಾಗಿದ್ದು, ತಾವು ಸಾರ್ವಜನಿಕ ಬದುಕಿಗೆ ಬರುವ ಮುನ್ನವೇ ಅಂದರೆ ತಾವು  ವಿದ್ಯಾರ್ಥಿಗಿದ್ದ ಸಂದರ್ಭದಲ್ಲಿ ತೆಗೆಯಲಾಗಿದ್ದ ವಿಡಿಯೋ ಅದು ಎಂದು ಹೇಳಿಕೊಂಡಿದ್ದಾರೆ.

ತಾವು ಕಾನೂನು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತೆಗೆಯಲಾಗಿದ್ದ ವಿಡಿಯೋ ಆದಾಗಿದ್ದು, ಸೆಲ್ಫೀ ಫೋಟೋಗಳೂ ಕೂಡ ಲೀಕ್ ಆಗಿವೆ ಎಂದು ಸಂದೀಪ್ ಕುಮಾರ್  ಆಪ್ತರು ಮಾದ್ಯಮದೊಂದಿಗೆ ಹೇಳಿಕೊಂಡಿದ್ದಾರೆ. ಪ್ರಸ್ತುತ ವಿಡಿಯೋ ಲೀಕ್ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿರುವ ಸಂದೀಪ್ ಕುಮಾರ್ ತಮಗೆ ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಆಪ್ ಶಾಸಕ ಸಂದೀಪ್ ಕುಮಾರ್ ಅವರ ಸೆಕ್ಸ್ ವಿಡಿಯೋ ತಮ್ಮ ಕೈ ಸೇರುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ್  ಕೇಜ್ರಿವಾಲ್ ಅವರು ಅವರನ್ನು ಮಂತ್ರಿಗಿರಿಯಿಂದ ವಜಾಗೊಳಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಇಂತಹ ಘಟನೆಗಳೆಲ್ಲ ಸಹಿಸಲಸಾಧ್ಯ. ನಮ್ಮ ನೈತಿಕತೆ ಕುರಿತಂತೆ ಯಾವುದೇ  ಕಾರಣಕ್ಕೂ ರಾಜಿ ಮಾಡಿಕೊಳ್ಳಲು ತಾವು ಸಿದ್ಧರಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT