ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಡುರಸ್ತೆಯಲ್ಲಿ ಇಳಿಸಿದ ಆ್ಯಂಬುಲೆನ್ಸ್: ಮಗಳ ಶವ ಹೊತ್ತು 5 ಕಿ.ಮೀ ನಡೆದ ತಂದೆ

ಶವ ಸಾಗಣೆಗೆ ಹಣವಿಲ್ಲದೆ ಪತ್ನಿಯ ಮೃತದೇಹವನ್ನು ಹೊತ್ತ ಪತಿಯೊಬ್ಬ ಕಿಲೋಮೀಟರ್ ಗಟ್ಟಲೆ ನಡೆದಿದ್ದ. ಈ ಘಟನೆ ಮಾಸುವ ಮುನ್ನವೇ ಒಡಿಶಾದಲ್ಲಿ ಮತ್ತೊಂದು...

ಕಣ್ಣೀರಿಡುತ್ತಾ ಮಗಳ ಶವವನ್ನು ಹೊತ್ತೊಯ್ಯುತ್ತಿರುವ ಪೋಷಕರು
Manjula VN
Updated On : 3 Sept 2016, 12:27 pm

ಮಲ್ಕಂಗಿರಿ (ಒಡಿಶಾ): ಶವ ಸಾಗಣೆಗೆ ಹಣವಿಲ್ಲದೆ ಪತ್ನಿಯ ಮೃತದೇಹವನ್ನು ಹೊತ್ತ ಪತಿಯೊಬ್ಬ ಕಿಲೋಮೀಟರ್ ಗಟ್ಟಲೆ ನಡೆದಿದ್ದ. ಈ ಘಟನೆ ಮಾಸುವ ಮುನ್ನವೇ ಒಡಿಶಾದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ.

ಆ್ಯಂಬುಲೆನ್ಸ್ ಚಾಲಕನೊಬ್ಬ ನಡುರಸ್ತೆಯಲ್ಲೇ ಕೈಬಿಟ್ಟ ಕಾರಣ 7 ವರ್ಷದ ತನ್ನ ಮಗಳ ಮೃತ ದೇಹವನ್ನು ಹೊತ್ತ ತಂದೆಯೊಬ್ಬ 5 ಕಿ.ಮೀ ವರೆಗೂ ಕಣ್ಣೀರಿಡುತ್ತಾ ನಡೆದಿರುವ ಘಟನೆಯೊಂದು ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ನಡೆದಿದೆ.

ಬರ್ಶಾ ಖೆಮುಡು (7) ಮೃತಪಟ್ಟ ಬಾಲಕಿ. ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಬಾಲಕಿಯನ್ನು ಮಥಿಲಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ನಾಯಕ್ ಗುಡ ಪ್ರದೇಶದ ಬಳಿ ಬರುತ್ತಿದ್ದಂತೆ ಬಾಲಕಿಯ ಸ್ಥಿತಿ ಚಿಂತಾಜನಕವಾಗಿ ಮಾರ್ಗದ ಮಧ್ಯೆಯೇ ಮೃತಪಟ್ಟಿದ್ದಳು.

ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಮೃತದೇಹದೊಂದಿಗೆ ಪೋಷಕರನ್ನು ನಡುರಸ್ತೆಯಲ್ಲಿಯೇ ಇಳಿಸಿದ್ದಾನೆ. ಈ ರಸ್ತೆಯಲ್ಲಿ ವಾಹನಗಳು ಚಲಿಸುವುದು ಅತ್ಯಂತ ವಿರಳವಾಗಿದ್ದರಿಂದ ಬೇರಾವುದೇ ವಾಹನಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಗಳ ಸಾವಿನ ದುಃಖದಲ್ಲಿದ್ದ ಪೋಷಕರು ಕಣ್ಣೀರಿಡುತ್ತಾ 5 ಕಿ.ಮೀ ವರೆಗೂ ನಡೆದು ಹೋಗಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಕೆ. ಸುಧರ್ಶನ್ ಚಕ್ರಬೋರ್ತಿ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.

ಮೃತದೇಹವನ್ನು ನಡುರಸ್ತೆಯಲ್ಲಿ ಬಿಡುವ ಮೂಲಕ ಆ್ಯಂಬುಲೆನ್ಸ್ ಚಾಲಕ ನಿರ್ಲಕ್ಷ್ಯತೆ ತೋರಿದ್ದಾನೆ. ಚಾಲಕನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments