ಬಿಜೆಪಿ ನಾಯಕ ವಿಜೇಂದರ್ ಗುಪ್ತ 
ದೇಶ

ಆಮ್ ಆದ್ಮಿ ಪಕ್ಷದಲ್ಲಿ ಸೆಕ್ಸ್ ಸ್ಕ್ಯಾಂಡಲ್ ಸಾಮಾನ್ಯ: ಬಿಜೆಪಿ

ಸೆಕ್ಸ್ ಸಿಡಿ ವಿವಾದ ಕುರಿತಂತೆ ಸಂದೀಪ್ ಕುಮಾರ್ ರನ್ನು ಆಪ್ ಹಿರಿಯ ನಾಯಕ ಅಶುತೋಷ್ ಅವರು ಸಮರ್ಥಿಸಿಕೊಂಡಿರುವುದನ್ನು ನೋಡಿದರೆ ಆಮ್ ಆದ್ಮಿ ಪಕ್ಷದಲ್ಲಿ ಸೆಕ್ಸ್ ಸ್ಕ್ಯಾಂಡಲ್...

ನವದೆಹಲಿ: ಸೆಕ್ಸ್ ಸಿಡಿ ವಿವಾದ ಕುರಿತಂತೆ ಸಂದೀಪ್ ಕುಮಾರ್ ರನ್ನು ಆಪ್ ಹಿರಿಯ ನಾಯಕ ಅಶುತೋಷ್ ಅವರು ಸಮರ್ಥಿಸಿಕೊಂಡಿರುವುದನ್ನು ನೋಡಿದರೆ ಆಮ್ ಆದ್ಮಿ ಪಕ್ಷದಲ್ಲಿ ಸೆಕ್ಸ್ ಸ್ಕ್ಯಾಂಡಲ್ ಎಂಬುವುದು ಸಾಮಾನ್ಯ ಎಂಬಂತಿದೆ ಎಂದು ಬಿಜೆಪಿ ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ವಿಜೇಂದರ್ ಗುಪ್ತ ಅವರು, ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅಥವಾ ಪಾರದರ್ಶಕತೆ ಇಲ್ಲ. ಸಂದೀಪ್ ಕುಮಾರ್ ಅವರನ್ನು ಸಮರ್ಥಿಸಿಕೊಂಡು ಅಶುತೋಷ್ ಬರೆದಿರುವ ಅಂಕಣವನ್ನು ನೋಡಿದರೆ ಸೆಕ್ಸ್ ಸ್ಕ್ಯಾಂಡಲ್ ಗೆ ಆಪ್ ಪಕ್ಷವೇ ಉತ್ತೇಜನ ನೀಡುತ್ತಿದೆ ಎಂಬಂತಿದೆ ಎಂದು ಹೇಳಿದ್ದಾರೆ.

ಅಶುತೋಷ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದರೂ ಕೇಜ್ರಿವಾಲ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ  ಕರ್ನಲ್ ದೇವೇಂದರ್ ಸೆಹ್ರಾವತ್ ಅವರೂ ಕೂಡ ಸ್ಪಷ್ಟ ಹೇಳಿಕೆಯೊಂದನ್ನು ನೀಡಿದ್ದರು. ಸಂದೀಪ್ ಕುಮಾರ್ ರಂತೆ ಸಾಕಷ್ಟು ನಾಯಕರು ಆಪ್ ನಲ್ಲಿದ್ದಾರೆಂದು ಹೇಳಿದ್ದರು.

ಪಕ್ಷದ ವಿರುದ್ಧ ಯಾರಾದರೂ ದನಿ ಎತ್ತಿದ್ದರೆ ಅವರನ್ನು ಪಕ್ಷದಿಂದಲೇ ಬಹಿಷ್ಕರಿಸುವ ಬೆಳವಣಿಗೆಗಳು ಇಂದು ನಡೆಯುತ್ತಿದೆ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಆಪ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಮತ್ತು ಪಾರದರ್ಶಕತೆ ಇಲ್ಲ ಎಂದು ಹೇಳುವುದಕ್ಕೆ ಇದೇ ಉದಾಹರಣೆಯಾಗಿದೆ. ಅಲ್ಲದೆ, ಆಪ್ ನಲ್ಲಿ ಸೆಕ್ಸ್ ಸ್ಕ್ಯಾಂಡಲ್ ಎಂಬುದು ಸಾಮಾನ್ಯವಾಗಿದೆ ಎಂಬುದನ್ನು ಎತ್ತಿತೋರಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT