ಹೈದರಾಬಾದ್; ಹೈದಾರಾಬಾದ್ ನಿಂದ ಶಿರಡಿಗೆ ಹೋಗುತ್ತಿದ್ದ ಖಾಸಗಿ ಬಸ್ ವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ 3 ವರ್ಷದ ಬಾಲಕನೋರ್ವ ಸಜೀವ ದಹನವಾಗಿ, 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಹುಮ್ನಾಬಾದ್ ನಲ್ಲಿ ಶುಕ್ರವಾರ ನಡೆದಿದೆ.
ತೆಲಂಗಾಣದ ಗೋದಾವರಿಖಾನಿಯ ರಿಯಾನ್ (3) ಮೃತಪಟ್ಟ ಬಾಲಕನೆಂದು ಗುರ್ತಿಸಲಾಗಿದೆ. ಘಟನೆ ವೇಳೆ ಗಾಯಗೊಂಡವರನ್ನು ಅಧಿಕಾರಿಗಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
29 ಪ್ರಯಾಣಿಕರನ್ನು ಹೊತ್ತು ಖಾಸಗಿ ಬಸ್ ವೊಂದು ಬಂದಿತ್ತು. ಬಸ್ ನ ಎಂಜಿನ್ ಭಾಗದಲ್ಲಿ ಬೆಂಕಿ ಹೊತ್ತುಕೊಂಡಿದೆ. ನಂತರ ಕೆಲ ನಿಮಿಷಗಳಲ್ಲೇ ಬೆಂಕಿ ಬಸ್ ಸುತ್ತಲೂ ಆವರಿಸಿಕೊಂಡಿದೆ. ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.