ನವದೆಹಲಿ: ಮುಖ್ಯಮಂತ್ರಿ ಜಯಲಲಿತಾ ಅವರ ಆದೇಶದಂತೆ ನದಿ ಮುಖಜ ಭೂಮಿಯ ನೀರಾವರಿಗೆ ಮೆಟ್ಟೂರು ಜಲಾಶಯದಿಂದ ಮಂಗಳವಾರ ಬೆಳಗ್ಗೆ ನೀರು ಬಿಡುಗಡೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಕರ್ನಾಟಕ ಇಂದಿನವರೆಗೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗಿತ್ತು. ನದಿ ಮುಖಜ ಭೂಮಿಯ ನೀರಾವರಗೆ 5 ಸಾವಿರಕ್ಕೂ ಹೆಚ್ಚು ನೀರನ್ನು ಮೆಟ್ಟೂರು ಜಲಾಶಯದಿಂದ ಬಿಡುಗಡೆ ಮಾಡಲಿದ್ದು, ರೈತರಿಗೆ ಇನ್ನಷ್ಟು ಹೆಚ್ಚು ನೀರು ಬೇಕಾದರೆ 15 ಸಾವಿರ ಕ್ಯೂಸೆಕ್ ವರೆಗೆ ಹೆಚ್ಚಿಸಲಾಗುವುದು. ಮೆಟ್ಟೂರಿನಿಂದ ಬಿಡುಗಡೆಯಾದ ನೀರು ತಿರುಚಿರಾಪಳ್ಳಿಯ ಅನೈಕಾಟು ಮುಕೊಂಬುಗೆ ತಲುಪಲಿದ್ದು, ಅಲ್ಲಿಂದ ಈ ವಾರಾಂತ್ಯದಲ್ಲಿ ಅಣೈಕಾಟು ಕಲ್ಲನೈ ತಲುಪಲಿದೆ.
ಕಲ್ಲನೈಯಿಂದ ತಂಜಾವೂರು, ನಾಗಪಟ್ಟಿಣಂ ಮತ್ತು ತಿರುವಾರೂರು ಜಿಲ್ಲೆಗಳ ನದಿ ಮುಖಜ ಭೂಮಿಗಳಲ್ಲಿರುವ ಸಾಂಬಾ ಬೆಳೆಗಾರರಿಗೆ ನೀರುಣಿಸಲಾಗುತ್ತದೆ. ಕಾವೇರಿ ನೀರಿನ ಕೊರತೆಯಿಂದಾಗಿ ಈ ವರ್ಷ ಮೆಟ್ಟೂರು ಜಲಾಶಯದಿಂದ ತಡವಾಗಿ ನೀರು ಹರಿಯಬಿಡಲಾಗಿದೆ. ಸಾಂಬಾ ಬೆಳೆಯನ್ನು ಉಳಿಸಲು ಮುಂದಿನ ತಿಂಗಳು ಮಳೆ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿ ತಮಿಳು ನಾಡಿನ ಸಾಂಬಾ ಬೆಳೆಗಾರರಿದ್ದಾರೆ.