ಸಂಗ್ರಹ ಚಿತ್ರ 
ದೇಶ

90 ವರ್ಷದ ಕ್ಯಾನ್ಸರ್ ಪೀಡಿತ ವೃದ್ಧೆ ಮೇಲೆ ಅತ್ಯಾಚಾರ

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 90 ವರ್ಷದ ವೃದ್ಧೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ...

ಕೊಲ್ಲಂ: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 90 ವರ್ಷದ ವೃದ್ಧೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

5 ದಿನಗಳ ಹಿಂದೆ ಘಟನೆ ನಡೆದಿದ್ದು, ಬುಧವಾರ ಸಾರ್ವಜನಿಕರ ಗಮನಕ್ಕೆ ಬಂದಿದೆ. ಸಂತ್ರಸ್ತ ವೃದ್ಧೆಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಘಟನೆ ಬಳಿಕ ಸಂತ್ರಸ್ಥೆಯನ್ನು ಭೇಟಿಯಾದ ಆಕೆಯ ಎಲ್ಲಾ ಸಂಬಂಧಿಕರೊಂದಿಗೂ ಮಾತುಕತೆ ನಡೆಸಿ ತನಿಖೆಯನ್ನು ಆರಂಭಿಸಲಾಗುತ್ತದೆ ಎಂದು ಕೊಲ್ಲಂ ಗ್ರಾಮೀಣ ಎಸ್ ಪಿ ಅಜಿಥಾ ಬೇಗಂ ಅವರು ಹೇಳಿದ್ದಾರೆ.

ಕಾಮುಕ ಮನೆಯ ಹಿಂಬಂದಿ ಬಾಗಿಲಿನಿಂದ ಒಳಗೆ ಬಂದಿದ್ದನು. ಮನೆಯ ಬಗ್ಗೆ ಚೆನ್ನಾಗಿ ತಿಳಿದ ವ್ಯಕ್ತಿಯೇ ಮಾಡಿದ್ದಾನೆ. ಚಾಕು ಹಿಡಿದು ದುಷ್ಕರ್ಮಿ ಒಳ ಬಂದಿದ್ದ. ನನಗೇನು ಮಾಡಬೇಡ ಎಂದು ಅಂಗಲಾಚಿದ್ದೆ. ಆದರೆ, ಆತ ನನ್ನ ಮಾತನ್ನು ಕೇಳಲಿಲ್ಲ. ಆತನನ್ನು ಪೊಲೀಸರು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ವೃದ್ಧ ಮಹಿಳೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು, Video!

ಸರ್ಕಾರ ಉರುಳಿಸಲು BJPಯಿಂದ ಕುದುರೆ ವ್ಯಾಪಾರ: ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ಆಫರ್: ಸಿಎಂ ಅಬ್ದುಲ್ಲಾ ಆರೋಪ

ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್, Video ವೈರಲ್

ಅಕ್ಟೋಬರ್, ನವೆಂಬರ್‌ನಲ್ಲಿ ಪಂಚಾಯತ್ ಚುನಾವಣೆ ಸಾಧ್ಯತೆ; ಗ್ರಾಮಗಳಲ್ಲಿ ಗರಿಗೆದರಲಿದೆ ರಾಜಕೀಯ!

'ಹಿಂದಿನ ಸೀಟಿಗೆ ಬಾ': ಬಸ್ಸಿನಲ್ಲಿ ಕಾಲೇಜ್ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ; ಕಂಡಕ್ಟರ್ ಇರ್ಫಾನ್ ಬಂಧನ